ಅಕಾರ
ಎಲ್ಲವೂ ತಾನೆಂದು
ಬೀಗುವುದೇ ಅಹಂಕಾರ!!
ಎಲ್ಲರೊಳು ತಾನೂ ಒಂದು
ಎನ್ನುವುದೇ ಅಲಂಕಾರ!!
ಕಂಡೂ ಕಾಣದಂತೆ
ನಟಿಸುವುದೇ ಅಂಧಕಾರ!!
ಹೊತ್ತ ಹೊಣೆಯನ್ನು
ನಿಭಾಯಿಸುವುದೇ ಅಧಿಕಾರ!!
ಎಲ್ಲರ ನಿರ್ಣಯಕ್ಕೆ
ತಲೆ ಬಾಗುವುದೇ ಅಂಗೀಕಾರ!!
ಎಲ್ಲರ ದಾರಿಯಲಿ
ನಡೆಯುವನೇ ಅನುಕಾರ!!
- ಪಿ.ಜಿ.ಜ್ಯೋತಿ
12 Jun 2017, 08:28 pm
Download App from Playstore: