"ಭಿಕ್ಷಾ ಪಾತ್ರೆ"

ನನ್ನ ಗುರುವಿನ ಭಿಕ್ಷಾಪಾತ್ರೆ
ಕಳೆದು ಹೊಗಿದೆ
ನೀವೇನಾದರು ಕಂಡಿರಾ ಬಂಧುಗಳೆ?
"ಬುಧ್ದನ" ಭಿಕ್ಷಾಪಾತ್ರೆ ಕಾಣದಾಗಿದೆ

ಕೆತ್ತ ಕಲ್ಲಿನ ಗುಡಿ ಮೇಲೆ
ಕೊಳತು ನಾರುತಿದೆ ಕಂಡಿರಾ
ಮಿಟಮಿನ್ ಕೊರತೆಯಿಂದ
ನನ್ನ ಭಂದುಗಳು ಶವಗಳಾಗುತ್ತಿದ್ದಾರೆ
ಅಲ್ಲೆನಾರು ಭಿಕ್ಷಾಪಾತ್ರೆ ಕಂಡಿರಾ

ಕಸದ ಬುಟ್ಟಿಯಿಂದ ಕಾರ್ಪೊರೇಟ್
ಕಸದ ವರಿಗೂ ಆಹಾರ ಪೊಲಾಗುತ್ತಿದೆ
ಅಲ್ಲೆನಾರು ಕಂಡಿರಾ
ಸಲಗದ ಮಗನಿಲ್ಲದ ನನ್ನ ಭಂದುಗಳು
ಹಸಿವಿನಿಂದ ಸಾಯುವರು ಅಲ್ಲಿ ಕಂಡಿರಾ

ಭಿಕ್ಷಾಪಾತ್ರೆ ಕಳೆದು ಹೋಗಿದೆ
ಕಂಡಿರಾ ಬಂಧುಗಳೆ
ನನ್ನ ಗುರುವಿನ ಭಿಕ್ಷಾಪಾತ್ರೆ
"ಬುದ್ದನ" ಭಿಕ್ಷಾಪಾತ್ರೆ ಕಂಡಿರಾ ಬಂಧುಗಳೆ

- ಹೇಮಚಂದ್ರ

12 Jun 2017, 09:00 pm
Download App from Playstore: