ಅವನು
ಸದ್ದು ಗದ್ದಲದೊಳಗ
ಗದ್ದುಗೆಯ ಪಡೆದವನು!!
ಸದ್ದಿಟ್ಟು ಘರ್ಜಿಸಿದ
ದೊರೆಯು ಅವನು!!
ಊರ ಸುತ್ತಲೂ
ಭಾರೀ ಕೋಟೆ ಕಟ್ಟಿಸಿದವನು!!
ಕೋಟೆಯ ಒಳಗಿನ ನಾಡ
ಸಿರಿಯು ಅವನು!!
ತೇರನ್ನು ಏರದ ದೇವ
ರಥವನ್ನು ಏರಿ ಕುಳಿತಿಹನು!!
ಅಪಜಯವ ಅಳಿಸಿದ
ವಿಜಯಿ ಅವನು!!
ಹೊಳೆವ ಕತ್ತಿಯ ಹರಿತದ
ಶೌರ್ಯದ ಗುರುತು ಅವನು!!
ಈ ಮಣ್ಣಿಲಿ ಜನಿಸಿದ
ಹೆಮ್ಮೆಯ ಮಗನು ಅವನು!!
- ಪಿ.ಜಿ.ಜ್ಯೋತಿ
12 Jun 2017, 09:44 pm
Download App from Playstore: