ಅವಸಾನದಂಚಿನಲ್ಲಿ .... ಸುಪ್ತ ಪ್ರತಿಭೆಗಳು......

ಒಂದೇ- ಒಂದು ಹುಳಿ ಪೆಟ್ಟಿನಿಂದ
ಕಲ್ಲೊಂದು ಸುಂದರ ಶಿಲೆಯಾಗದು
ಒಂದೇ- ಒಂದು ಸಂದರ್ಶನದಿಂದ
ವ್ಯಕ್ತಿಯೊಬ್ಬನ ಪಾಂಡಿತ್ಯ ಅಳೆಯಲಾಗದು......

ಸುಂದರವಾದ ಉಪಹಾರ ನಿಲಯವು
ನೀಡುವುದೇ ರುಚಿಕರ ಉಪಹಾರ!
ಸಲಹಾಕಾರವೇ ಇಲ್ಲದ ಭೋಜನಾಲಯವು
ನೀಡಬಲ್ಲದು ಅದ್ಬುತ ರುಚಿಯ!

ಸುಪ್ತ ಪ್ರತಿಭೆ ಅರಿಯದು
ಮೆಚ್ಚಿಸುವ ಮಾರ್ಗ....
ಅವಕಾಶ ಸಿಕ್ಕರೆ ಮರೆಯದು
ದುಡಿಯುವ ಮಾರ್ಗ.....
ತೋರುವುದು ಎಲ್ಲರಿಗೂ
ಎಂದೆಂದೂ ಸನ್ಮಾರ್ಗ....


ಶಾರಧ

- ಶಕುಂತಲಾ

13 Jun 2017, 01:58 pm
Download App from Playstore: