ಅದೇನೋ ಅವಸರ............

ಅದೇನೋ ಅವಸರ ನನ್ನ
ಮನಕೆ ನಿನ್ನ ನೋಡಿ ತಣ್ಣಗಾಗಲು
ತಾನು ನಿನ್ನ ನಗಿವಿನ ಹಾಗೆ..........

ಕುಂತು ನಿನ್ನ ಸನಿಹದಲ್ಲಿ
ಮಾತನಾಡಿ ಮನಸಿನಲ್ಲಿ
ಕೊಂಚ ನಿನ್ನ ಕಾಡಿ ಬೇಡಿ
ಮತ್ತೆ ನಿನ್ನ ಮಾತನಾಡಿ........

ಮಲಗುವಾಸೆ ನನಗಿಂದು ನಿನ್ನ
ಮಡಿಲ ಸ್ಪರ್ಶದಲ್ಲಿ ಬೆಚ್ಚನೆ
ಉಸಿರಿನಲ್ಲಿ...........

ಅದೇನೋ ಅವಸರ ನನಗೆ
ನಿನ್ನ ನೋಡುವ ತವಕದಲ್ಲಿ ನನ್ನ
ಮರೆಯುವ ಆಸೆಯಲ್ಲಿ.........

- ಚುಕ್ಕಿ

13 Jun 2017, 02:44 pm
Download App from Playstore: