ನಾ ಕಂಡ ಬೇಂದ್ರೆ.
ದುಃಖವೆನಿದ್ದರೂ ನೋವು ಎಷ್ಟಿದ್ದರೂ
ಸುಕವನಷ್ಟೇ ಉಣಿಸಿದಿರಿ ನೀವೂ
ಒಡಲ ಬಡಬಾಗ್ನಿಯಲಿ ಬೆಂದು
ನೋವನ್ನೇ ಗಾನಕ್ಕೆ ತೆತ್ತು ಬೇಂದ್ರೆಯಾದಿರಿ
ಜೀವನದ ಸಿಹಿಕಹಿಗಳ
ನಾಕುತಂತಿಯಲಿ ಮೀಟಿ
ಯಾಕಾಗಿ ಬೇಕಾಗಿ ಸಾಕಾಗಿ ಕುಣಿಸುತ್ತಾ
ಉಯ್ಯಾಲೆಯಾಡಿಸಿ ನಗಿಸಿದಿರಿ
ಸಾದಕರೆಲ್ಲರ ಸಾದನಕೇರಿಗೆ
ಕೈಬೀಸಿ ಬಾ ಹತ್ತಿರ ಎಂದಿರಿ
ಕನ್ನಡಾಂಬೆಯ ಚೈತನ್ಯ ಪೂಜೆಯನ್ನು
ಜಗ ಹೋಗಳುವಂತೆ ಮಾಡಿದಿರಿ
ಜ್ಞಾನ ಪೀಠ ದ ಗರಿಯನ್ನು
ಸಾರಸ್ವತ ಲೋಕಕ್ಕೆ ಮುಡಿಸಿದಿರಿ
ಸಹಸ್ತ್ರ ಪದ್ಯಗಳ ಸರದಾರರಾಗಿ
ವರಕವಿಯಾಗಿ ಮಾನಸದಲ್ಲಿ ಉಳಿದಿರಿ
ನಕ್ಕು ನಗಿಸಿ ರಮಿಸುವ ರಸಿಕರಿಗೆ
ಕೊಟ್ಟಿರಿ ನೀವೂ ಸಖೀಗೀತ,ಕಾಮಕಸ್ತೂರಿ
ಶ್ರಾವಣ ಬಂತು ಶ್ರಾವಣ ನಾದಲೀಲೆಯಾಡಿ
ಮುಗಿಲಮಲ್ಲಿಗೆ ಅರಳಿಸಿದಿರಿ
ಪಾತರಾಗಿತ್ತಿ ಪಕ್ಕದಲಿ ಕೂತು
ಇಳಿದುಬಾ ತಾಯಿ ಎಂದು ಗಂಗೆಯ ಕರೆದು
ಹಿಂದ ನೋಡದ ಗೆಳತಿ ಎಂದು ಬರೆದು
ಕಾವ್ಯ ಪ್ರಭೆಯ ಬೆಳಗಿಸಿದಿರಿ
ಗೆಳೆಯರ ಗುಂಪಿನ ನಾಯಕರಾದ
ನಿಮಗೆ ನಮ್ಮ ನಮನ
ಶಾಸ್ತ್ರವಾಗಿ,ಧರ್ಮವಾಗಿ ಯೋಗಜ್ಞಾನವಾಗಿ
ಅರಳು ಮರಳಿನ ಸತ್ಯದರ್ಶನ ಮಾಡಸಿ
ಗಿಡ ಗಂಟೆಯ ಕೊರಳೊಳಗಿಂದ
ದ್ವನಿಯಾಗಿ ಹೋಮ್ಮಿದಿರಿ
ರಾಶಿ ರಾಶಿ ಮುತ್ತುಗಳ ಬಿಟ್ಟು
ಜೀವನ ಯಾತ್ರೆ ಮುಗಿಸಿದ
ನಿಮಗೆಇದೋನಮನ, ನಿಮಗೆಇದೋನಮನ
- ಅನಿಲಕುಮಾರ್.ಜಿ.
13 Jun 2017, 07:59 pm
Download App from Playstore: