ನನ್ನವಳು ಮುದ್ದು ಸಖಿ.....!

ನಸು ನಗುವಿನ ಹೂವೊಂದು
ಮಸುಕಿನಲ್ಲಿ ಅರಳಿದಂತೆ
ಜೇನು ಗೂಡ ಮನೆಯ ನೋಡಿ
ಜೀವಿಸುವ ತವಕದಂತೆ

ಪ್ರಣಯವಾಯಿತು ಕಾಡಿ
ಮುದ್ದು ಮುಖವ ನೋಡಿ ನೋಡಿ

ಚೆಲುವ ಹರೆಯ ವಯಸ್ಸೆನ್ನದೆ
ಚೆಲ್ಲಾಟವ ಅರಿಯದಾದೆ
ಕಾಂತಿಯುತಾ ಮುಖ ತೊಟ್ಟ
ರಕ್ಕಸಿಯ ಬಲೆಗೆ ಬಿದ್ದೆ!
ಆದರೆ...
ಚೆಲುವನರಸಿ ಬಂದ ಚೆಲುವೆ
ಮುಖವ ನೋಡಿ ಅಂಜುತಿರೆ
ಸಂಶಯವೋ ಉಕ್ಕಿ ಉಕ್ಕಿ
ಮನದೊಳಗೆ ಬಿಕ್ಕಿ ಬಿಕ್ಕಿ
ತೀರಾ ನೇರ ಅವಳ ನೋಟ
ಚುಚ್ಚಿ ಹೇಳುತಿದೆ ನೀತಿ ಪಾಠ
ಅವಳು ದುಃಖ ಮರೆಮಾಚುತಾ
ನಕ್ಕು ನಕ್ಕು ಸಹಿಸಿಕೊಳ್ಳುತಾ
ಬಂದು ನಿಂತು ಹೇಳಿದಳು

ನಿನ್ನ ನಾನು ಮರೆಯಲಾರೆ
ದ್ರೋಹವೆಂದು ಮಾಡಲಾರೆ
ಕೇಳು ಸಖ ನನ್ನ ಮಾತು
ಮರೆತುಬಿಡು ನನ್ನನಿಂತು.!
ಕಾರಣವ ಕೇಳಬೇಡ
ತಪ್ಪು ದಾರಿ ತುಳಿಯಬೇಡ
ನಿನ್ನ ಒಳಿತಿಗಾಗಿ ಈ ನಿರ್ಧಾರ
ಮರೆತು ಬಿಡು ಭರಪೂರ
ಯಶಸ್ಸು ನಿನ್ನದಾಗಿ...
ಕೀರ್ತಿ ಹೆಸರು ಹೆಚ್ಚಾಗಿ
ಮರೆಯಬೇಡ ನನ್ನನಾಗ
ನೀಡು ಹೃದಯದಲ್ಲಿ ಪುಟ್ಟ ಜಾಗ
ಎಂದು ಹೇಳಿ ಹೊರಟ ಸಖಿ
ನನ್ನ ಮನದ ಜೀವನ್ಮುಖಿ

ಛೇ! ನಾನೆಂಥಾ ದಡ್ಡ ಪ್ರೇಮಿ?
ನನ್ನವಳು ಚಿನ್ನ ಪ್ರೇಮಿ

ಅರಿಯದಾಗಿ ಅವಳ ಮನಸು
ಎಗರಾಡಿದೆ ಇರಿಸು ಮರಿಸು
ಸರಿ...
ಆಯಿತೆನ್ನ ಮುದ್ದು ಚೆಲುವೆ
ಸಾಧನೆಯು ನನ್ನ ಗೆಲುವೆ
ನಿನ್ನ ಅಕ್ಕರೆಯು ಸಾಕು
ನನಗೆ ನಿನ್ನ ಪ್ರೀತಿ ಬೇಕು
- ದೇವ 'ನಾಯಕ' ಕಜ್ಜೇರ

- Dev

14 Jun 2017, 01:32 pm
Download App from Playstore: