ಕನವರಿಕೆ

ಮುಗಿದು ಹೋದ ಕಾಲವ
ಮುಂಜಾನೆ- ಮುಸ್ಸಂಜೆ
ನೆನೆಯುತ ಮರೆಯುವೆ
ನನ್ನೆಲ್ಲ ದುಗುಡವ,,,,,
ಕರುಣಿಸು ನನ್ನವ್ವ ....

ನಿನ್ನ ಸೇವೆಯೆ ನನ್ನುಸಿರು
ನೀ- ತಾ ಬಾಳಲಿ ಹೊಸ ಚಿಗುರು
ನಿನಗಾಗಿ ಮುಡಿಪಿಡುವೆ ನನ್ನುಸಿರು
ಜಯಶಾಲಿ ಆಗೆಂದು ನೀ ಹರಸು!

ನಿನದೆ ಈ ಜಗವೆಲ್ಲ
ನೀ ಕಣ್ಮುಚ್ಚಿ ಕುಳಿತರೆ ಗತಿಯಿಲ್ಲ
ಸುಸಂಸ್ಕೃತ ಪ್ರಜೆಗಳ
ನಿರ್ಮಾಣದ ಜವಾಬ್ದಾರಿ ನನದು
ಗುರುವಾಗಿ ಸನ್ಮಾರ್ಗ ತೊರುವ
ಹೊಣೆಗಾರಿಕೆ ನನದು
ನೀ ನೀಡು ಸದಾವಕಾಶ,,,,,,
ನಾ ಬೆಳಗುವೆ ಪ್ರಕಾಶ,,,,,,,,

ಕಲ್ಮಶವಿಲ್ಲದ ಮಕ್ಕಳ ಹೃದಯದಿ
ಹರಿಸಲು ಪರಿಶುದ್ಧ ಜ್ಞಾನದ ನದಿ
ನಾ ಕನವರಿಸುತಿರುವೆ ಕಾತುರದಿ
ನೀ ಎಡೆಗೊಡು ಈ ಜನುಮದಿ!



ಶಾರಧ

- ಶಕುಂತಲಾ

14 Jun 2017, 04:53 pm
Download App from Playstore: