ತಾರೆಗಳು........
ತಾರೆಗಳು ಸಂಜಾ ವೇಳೆಯಲ್ಲಿ
ಆಡುತ್ತಿದ್ದರು ಉಲ್ಲಾಸದಿಂದ
ಮೇಘರಾಜನ ಮನೆಯ ಅಂಗಳದಲ್ಲಿ
ತಮ್ಮ ಬೆಳದಿಂಗಳ ನಗುವು ಚೆಲ್ಲಿ ಬಾನಿಗೆ......
ಬಂದನು ಶಶಿಯು ತನ್ನ ತಂಪನ್ನು
ಬೀರುತ್ತಾ ತಾರೆಗಳೆಡೆಗೆ........
ಅವನನೋಡಿ ಮನಸೋತ ನಕ್ಷತ್ರಗಳು
ನಿಂತವು ಅವನಲ್ಲಿ ತಮ್ಮ ಚೆಲುವನ್ನು ಚೆಲ್ಲಿ
ಅವನ ಬೆಳಕ ಹೆಚ್ಚಿಸಲು ಇರುಳಿನ ಮಂಕಾದ ಕತ್ತಲು ಕಳೆಯಲು .........
- ಚುಕ್ಕಿ
14 Jun 2017, 05:56 pm
Download App from Playstore: