ಹಸಿವು
ಅದೊಂದು ದಿನ ಮುಂಜಾನೆ ನಾ ಹೊರಟಿದ್ದೆ ,
ಸೂರ್ಯನೂ ಎದ್ದಿರಲಿಲ್ಲ,
ಅಂದಿನ ಚಳಿಗ ಹನಿ ನೀರು ಮಂಜಾಗುತ್ತಿತ್ತು ,
ಅರೆ ಯಾರೋ ನರಳುತ್ತಿದ್ದಂತೆ ಭಾಸ ,
ಆ ಶಬ್ದವನ್ನೇ ಹಿಂಬಾಲಿಸಿದೆ ,
ಇನ್ನೂ ಘಾಡವಾದ ಕತ್ತಲೆ ಸರಿದಿರಲಿಲ್ಲ ,
ಅಲ್ಲಿದ್ದದ್ದು ಪ್ರಾಣಿ ಎಂದು ಭಾವಿಸಿ,
ಹತ್ತಿರ ಹೋದೆ , ಭಯದಿಂದಲೆ,
ಏನಾಷ್ಚರ್ಯ ಅದು ನನ್ನಂತೆ ಮಾನವ,
ಒಂದು ತುಂಡು ಬಟ್ಟೆ ಬಿಟ್ಟರೆ
ಅವನಲ್ಲಿ ಏನೂ ಇಲ್ಲ ,
ಮರಕ್ಕಂಟಿದ ಬಳ್ಳಿಯಂತೆ ,ಮಾಂಸವೆಲ್ಲ
ಕರಗಿಹೋಗಿ ಅಳಿದುಳಿದ ಮೂಳೆಯಲ್ಲೆ
ಅವನ ದೇಹ ನಡುಗುತ್ತಿತ್ತು.
ನನ್ನೊಂದು ಪ್ರಶ್ನೆಗೆ ಅವನು ಕೊಟ್ಟ ಉತ್ತರಕ್ಕೆ ,
ಕಲ್ಲಿಗೂ ಕಣ್ಣೀರು ಬರಬಹುದು,
ಬೆಟ್ಟವೇ ಕರಗಿ ನೆಲಕಚ್ಚಬಹುದು,
ಆ ಒಂದು ಮಾತಲಗಲ್ಲೆ ಅಡಗಿತ್ತು ಅವನೆಲ್ಲ
ನೋವು , ಯಾತನೆ,ಅಸಹಾಯಕತೆ,ಭಯವೆಲ್ಲವು.......
ಅದುವೇ ಕ್ರೂರ ಹಸಿವು...!
ತುತ್ತಿಗಾಗಿ ಏಕೆ ಜಗಳ, ತುತ್ತೇ ನಮ್ಮೆಲ್ಲರ ಜೀವಾಳ,
ಮರೆಯಬೇಡವೋ ಮನುಜ ತುತ್ತಿನ ಮೂಲ,
ನೀನೆಸೆಯೋ ಒಂದು ತುತ್ತಲ್ಲೆ ಅಡಗಿದೆ ಒಂದು
ಜೀವ ......ಎಚ್ಚರ ...!
*ಅನ್ನದಾತ ಸುಖೀ ಭವ*
< ಶುಭೋದಯ >
-ಮನೋಜ್ -
- manoj kumar
15 Jun 2017, 06:31 am
Download App from Playstore: