ತುಂತುರು / ಕೋರಿಕೆ

ವಸಂತಾಗಮನವಾಗಿದೆ
ಏಲ್ಲಿ ಮರೆತು ಮೆರೆಯಾದೆ
ತನ್ಮಯ ಮನವು ಸ್ಮರಿಸಿದೆ ನಿನ್ನೆನೇ
ಮರಳಿ ಬಾ ಗೂಡಿಗೆ
ಗುಟುಕಿಗಾಗಿ ಕಾದಿರುವೆ .

ನನ್ನ ನೀ ....ನಿನ್ನ ನಾ ಅರಿತಾಗ
ಭಾವಗಳ ಗೋಪುರ ಕಟ್ಟಿ ಸಂಭ್ರಮಿಸಿದೆ
ಮುಗಿಲೆತ್ತರಕ್ಕೆ ಮನಹಾರಿ ನಲಿದೆ
ಸ್ಪಂದಿಸು ಬಾ ನೀ ...ಈ ಸೂಕ್ಷ್ಮ ಮನಕೆ
ಸದಾ ನಿನ್ನದೇ ಕನವರಿಕೆ

ಹೂವಾಗಿ ಅರಳಿರುವ ಈ ಮನವು
ನಿನ್ನೋಲುಮೆಯ ಸ್ನೇಹವ ಕಾದಿದೆ
ಮೊಗ್ಗಿನ ಮನಕೆ ನೀ ಜಾರದಿರು
ಬೆಸೆದಿರುವ ಪ್ರೇಮವ ನೀ ದೂರದಿರು
ಇದುವೇ ನನ್ನಯ ಕೋರಿಕೆ ....

- Chandni

15 Jun 2017, 11:19 pm
Download App from Playstore: