ಮೂಢನಂಬಿಕೆ

ರಾತ್ರಿಯಿಡೀ ಓದಿ ಬೆಳಗ್ಗೆ ಮೈ ಮೇಲೆ
ಹಲ್ಲಿ ಬಿತ್ತೆಂದು ಪರೀಕ್ಷೆಗೆ ಹೋಗದೆ
ಕಳೆದು ಕೊಂಡನು ನಮ್ಮ ಪೆದ್ದಣ್ಣ
ಅವನ ಶಿಕ್ಷಣವನ್ನು.

ಕಪ್ಪು ಬೆಕ್ಕೊಂದ ರಸ್ತೆಯಲ್ಲಿ ಕಂಡು
ಮೊದಲ ದಿನದ ಕೆಲಸಕ್ಕೆ ಹೋಗದೆ
ಕಳೆದು ಕೊಂಡನು ನಮ್ಮ ಪೆದ್ದಣ್ಣ
ಅವನ ಕೆಲಸವನ್ನು.

ಮಡಿಯೆಂದು ಮಡದಿಯನ್ನು ಮನೆಯ
ಹೊರ ಕೂರಿಸಿದ್ದಕ್ಕೆ ಹೊರಟಳವಳು ತವರಿಗೆ,
ಕಳೆದು ಕೊಂಡನು ನಮ್ಮ ಪೆದ್ದಣ್ಣ
ಅವನ ಹೆಂಡತಿಯನ್ನು.

ಕಷ್ಟ ಬಂತೆಂದು ಸಿಕ್ಕೆಲ್ಲ ಮಾಂತ್ರಿಕರ ಬಲಿ
ಪೂಜೆ-ಗೀಜೆ ಮಾಡಿಸಿ
ಕಳೆದು ಕೊಂಡನು ನಮ್ಮ ಪೆದ್ದಣ್ಣ
ಅವನ ಹಣವನ್ನು.

ನಿಲ್ಲಲು ಆಗದೆ, ಹೊಟ್ಟೆಗೆ ಹಿಟ್ಟಿಲ್ಲದೆ,
ಇರಲು ಸೂರಿಲ್ಲದೆ, ಮೂಢನಂಬಿಕೆಯ ನಂಬಿ
ಕಳೆದು ಕೊಂಡನು ನಮ್ಮ ಪೆದ್ದಣ್ಣ
ಅವನ ಜೀವವನ್ನು.

- ಅಕ್ಷತ

16 Jun 2017, 04:25 pm
Download App from Playstore: