ಗುಲಾಬಿ

ಮುದ್ದಾದ ಗುಲಾಬಿಯ ಮುಖದಲ್ಲಿ
ನಗುವು ನೋಡಿ
ಮನಸೋತೆ ನಾನಿಂದು.......

ಕೆಂಪುನನ್ನ ಕೆನ್ನೆಯಲ್ಲಿ ನಿಂತೋಯಿತು
ನಾಚಿಕೆಯಾಗಿ ನಿನ್ನ ನೋಡುತ್ತಾ........

ಹಳದಿ ನನ್ನ ಎದೆಯಲ್ಲಿ ಚಿಗುರಿಸಿತು
ಅಚ್ಚಳಿಯದ ಸ್ನೇಹವಾಗಿ..........

ಕೇಸರಿಯು ನನ್ನ ಕೈಯಲ್ಲಿ ಕರಗೋಯ್ತು
ನಿನ್ನ ಕೈಹಿಡಿದಾಗ ನಮ್ಮಿಬ್ಬರ ಪ್ರೀತಿಯ ಬೆವರಾಗಿ..........

ಗುಲಾಬಿಯಲ್ಲಿ ಗುಲಾಬಿ ಬಣ್ಣವು ನಿನ್ನ
ಗುಂಗಲ್ಲಿ ನನ್ನ ಮರೆಸಿತು ನಿನ್ನ ಪ್ರೀತಿಯು ತಾನಾಗಿ...........

ಬಿಳುಪು ನನ್ನಲ್ಲಿ ಬೆಳಕಾಗಿ
ಮರೆಯಾಯಿತು ನಗುವಾಗಿ...........
ಬಿಳಿಯಲ್ಲಿ ಏಳು ಬಣ್ಣಗಳು ರೂಪ ಪಡೆಯುತ್ತವೆ ಆ ಏಳರಲ್ಲಿ ಕೋಟಿಬಣ್ಣಗಳು ತಮ್ಮ ಸೊಗಸ ತೋರುತ್ತವೆ ನಮ್ಮ ಜೀವನವಾಗಿ..............

ಎಲೆಗಳಲ್ಲಿನ ಹಸಿರು ಬಣ್ಣವು ನೀನಿರುವವರೆಗೂ ನಿನ್ನೊಡನೆ ಇರಲು ತಿಳಿಸಿತು ನಿನ್ನ ಹೃದಯದ ನೆರಳಾಗಿ ಅದರಲ್ಲಿನ ಮುದ್ದಾದ ಗುಲಾಬಿ ನಾನಾಗಿ..............

- ಚುಕ್ಕಿ

16 Jun 2017, 04:52 pm
Download App from Playstore: