ಪ್ರೀತಿಯ ಗೋರಿ

ಕತ್ತಲ ಸೀಳಿ ಬಂದ ಈಟಿ
ಹಾದಿತ್ತು ಪ್ರೀತಿ ಕೋಟೆ ದಾಟಿ
ಎಸೆದ ಕೈ ಕಾಣದಾಯ್ತು
ಎಲ್ಲೋ ಕೇಳಿದಂಗಾಯ್ತು ಬಳೆ ಸದ್ದು.

ಹೃದಯಕ್ಕೆ ಕಟ್ಟಿದ ಗೋರಿಗೆ
ಗುರುತು ಬೇಕಿಲ್ಲ,
ಒಳಗೆ ಬಿದ್ದಿರುವ ಹೆಣ
ಪ್ರೀತಿಯದೂ ಇದ್ದೀತು.

ಚಳಿಯ ಪಯಣ ಹೊರಟವಗೆ
ಕಂಬಳಿ ಬಳಿ ಇರಬೇಕು,
ಕನಸ ಮಾರ ಹೊರಟವಗೆ
ಕಂಬನಿ ಬೆಲೆ ತಿಳಿದಿರಬೇಕು.

ಶಕುನದ ಹಕ್ಕಿ ಹಾರಿತ್ತು ನೋಡ
ಗಿಡುಗ ಹಿಡಿದಿತ್ತು
ಹಕ್ಕಿ ಗೂಡಿನ ಜಾಡ.
ಪ್ರೇಮ ಪಕ್ಷಿಗೆ ಗುರಿಯಿಟ್ಟ ಬೇಡ
ಕಾಡ ಕವಿದಿತ್ತು ಬೇಸಿಗೆಯಲ್ಲಿ ಕಾರ್ಮೋಡ.

- ಶ್ರೀಗೋ.

16 Jun 2017, 09:54 pm
Download App from Playstore: