ತುಂತುರು / ತಲ್ಲಣ

ನೆನಪಿನ ಮಿಂಚುಹುಳುಗಳು
ಸಂಭ್ರಮಿಸುತಿದೆ ..ಈ ಕಡುಗಪ್ಪು
ನಿಶೆಯಲಿ .

ಕಡಲ ತೊರೆದು
ದಡವ ಮುತ್ತಿಟ್ಟು ಮರಳುವ ಅಲೆಯಂತೆ
ಮರಳಿ ಬಾ ನೀ ಅಲೆಯಾಗಿ
ನನ್ ಒಡಲಿಗೆ...ನನ್ ಒಲವಿಗೆ .

ಆಡದ ಮಾತು ತುಟಿಯಂಚಲಿ
ಮೌನವೆ ಮಾತಾಡಿದೆ.
ನೀ ಇರಲಾರೆ...ನಾ ತಡೆಯಲಾರೆ
ಕಾಯುವ ಹೃದಯಕ್ಕೆ ನೆನಪಿನ ಕಾವೇ ಸಾಕು.

ಕಣ್ಣಂಚಲಿ ಪುಟ್ಟ ಹನಿಗಳಿಗೆ ಕರೆ
ಆಧರಗಳಲ್ಲಿ ನಗುವಿಗೂ ಇಂದು ಸೆರೆ
ತುಡಿತ ಒಂದೇ ಯಾಚನೆ ಒಂದೇ
ಮರಳಿ ಬಾ ನನಗೆ ನಿನ್ನದೇ ಆಸರೆ .

ಒದ್ದೆಯಾಗಿದೆ ಭಾವಗಳು
ಮುದ್ದೆಯಾಗಿದೆ ಮನಸು
ಕದ್ದು ನನ್ನ ನಗು ...ಕದಲಿಸಿ ನನ್ನ ಮನ
ಏಕೆ ಕಾಡುವೆ ನೀ ಪ್ರತಿಕ್ಷಣ .

- Chandni

16 Jun 2017, 11:21 pm
Download App from Playstore: