ಅವಳೆ ನನ್ನವಳು

ನನ್ನ ಬದುಕಿನ ಅರಮನೆಯ
ಬಾಗಿಲು ಹೃದಯ ತೆರೆದು
ಅವಳದೆ ಚಿತ್ರ ಬರೆದೊಳು
ನನ್ನವಳು

ಬರೆದು ಕಾಣೆಯಾಗಿದ್ದಾಳೆ
ಇರಲಿ ಅವಳ ಚಿತ್ರ ಹೆಚ್ಚಾಗಿದೆ ಬಾಳಲ್ಲಿ
ನನ್ನ ಮರೆತಿಸಿದ ಆ ಕಣ್ಣು
ರವಿಯಂತೆ ಬೆಳಗುತ್ತಿದೆ

ಕೆನ್ನೆರಂಗು ತುಟಿರಂಗು ಕಂಪಾಗಿ
ಹರಿಶಿನದ ಮುಖ ಮಾಡಿ
ಕೆಂಪಾಗಿ ಬೊಟ್ಟಿಡುವಳು
ಚೂಪಾದ ಕಣ್ಣಬ್ಬು ಚೂರಿಯಿಂದ
ಗಾಯಗೊಳಿಸುವಂತೆ

ಚಳಿ ಗಾಳಿಗೆ ಬಾಗಿದೆ
ಮುಖದ ಮೇಲೆ ಒಂದೆರಡು ಕೂದಲು
ಮೂಗಿನ ಮೇಲೊಂದು ಮೂಗುತ್ತಿ
ಹುಲ್ಲಿಗೆ ಮೆತ್ತ ಮಂಜು ಹನಿಯಂತೆ

ಅವಳ ತುಟಿಯ ನಗು
ಗಲಿ ಬಿಲಿ ಯಾಗುವುದು ಮೈಯೆಲ್ಲಾ
ಕಿವಿಯ ಮೇಲೆ ಹರಳಿದ ಓಲೆಗೆ
ಕೂದಲು ಬಾಗಿದೆ

ಜಡೆಯ ಕೂದಲು ಮಲ್ಲಿಗೆಯು
ಸುತ್ತಿ ಗಮಲಿಡುತ್ತಾಳೆ
ಎಲ್ಲಿ ನೋಡಿದರೂ ಅವಳ ನೆನಪು
ಅವಳ ಹಚ್ಚಾಕಿಸಿ ಹುಚ್ಚುನಾಗಿರುವೆ

- ಹೇಮಚಂದ್ರ

17 Jun 2017, 03:43 pm
Download App from Playstore: