ನನ್ನವ್ವನ ಒಡಲಲ್ಲಿ

ಎಳ್ಳಂಚಿನ ಎಳೆಕೂಸು
ಬಳ್ಳಂಚಿನ ಒಳಮನಸ್ಸು
ನನ್ನವನ ಒಡಲಲ್ಲಿ
ತೂಗ್ಯವಳೆ ಅಯ್ಯೋ ತೂಗ್ಯವಳೆ
ನನ್ನವ್ವನ ಮುದ್ದಿನ ಕಿನ್ನಾರಿ

ಎದೆದ್ದು ಕುಂತವಳೆ
ಮೂರ್ ಬಾರಿ ಬಿದ್ದವಳೆ
ಆದ್ರೂನು ಅಂಜಿಲ್ಲದೆ ನಿಂತವಳೆ
ಮೋಗದಾಗ ನನ್ನವ್ವನ್ನೆ ಹೋತ್ತವಳೆ
ನನ್ನವ್ವನ ಮುದ್ದಿನ ಕಿನ್ನಾರಿ

ಚೂರ್ ಚೂರ್ ಕೆಂಪವಳೆ
ಬಿಳಿ ಬಣ್ಣ ಹೋತ್ತವಳೆ
ಮೋಗದಾಗ ಕಳೆಯನ್ನೇ ತೆತ್ತವಳೆ
ನಮ್ಮೂರಿನ ಮಂದಿಯೆಲ್ಲಾ ಮೆಚ್ಚವರೆ
ನನ್ನವ್ವನ ಮದ್ದಿನ ಕಿನ್ನಾರಿ

ಕಿಲಕಿಲನೆ ನಕ್ಕವಳೇ
ಬೆಳಂದಿಗಳ ಹೋಳಪನ್ನೇ ಬೀರವಳೆ
ಆ ಹೋಳಪಲ್ಲೆ ಮನೆಯಲ್ಲಾ ಬೆಳಗವಳೆ
ಮನೆಯ ನೋವೆಲ್ಲಾ ಮರೆಸವಳೆ
ನನ್ನವ್ವನ ಮದ್ದಿನ ಕಿನ್ನಾರಿ

ಎಳ್ಳಂಚಿನ ಎಳೆಕೂಸು
ಬಳ್ಳಂಚಿನ ಒಳಮನಸ್ಸು
ನನ್ನವನ ಒಡಲಲ್ಲಿ
ತೂಗ್ಯವಳೆ ಅಯ್ಯೋ ತೂಗ್ಯವಳೆ
ನನ್ನವ್ವನ ಮುದ್ದಿನ ಕಿನ್ನಾರಿ

- ಅಗಸ್ತ್ಯ

17 Jun 2017, 08:01 pm
Download App from Playstore: