ಅಪ್ಪ
ಗಡುಸಾದ ನಿನ್ನ ಮಾತು ಮನದಾಟಿತು
ಮೌನದಲ್ಲಿ ಪ್ರೀತಿಯಾಗಿ ಅಪ್ಪ............
ಗದರುವೆ ,ಬುದ್ದಿಹೇಳುವೆ ಧೈರ್ಯತುಂಬುವೆ
ಪ್ರಾತಿನಿತ್ಯ ನನ್ನ ನಗಿಸುವೆ.............
ಅಮ್ಮ ನಾನು ಮಾಡಿದ ಸಣ್ಣ ತಪ್ಪಿಗೆ
ಬೈಯುತ್ತಿದ್ದರೆ ಅಡ್ಡಿ ನೀನು ಬರುವೆ
ನನ್ನ ಮಗಳ ಬೈಯಲು ನಿಯಾರೆಂದು ಕೆಲವೇ.................
ಅಮ್ಮ ಎಂದು ನನ್ನ ಕರೆಯುವೆ ಮಗಳೆಯೆಂದು
ಪ್ರೀತಿತೋರುವೆ.................
ನನ್ನ ಪುಟ್ಟ ಮಡಿಲಲ್ಲಿ ಮಗುವಂತೆ ಮಲಗುವೆ
ಹಣೆಯ ಮೇಲೆ ಮುತ್ತನಿಟ್ಟು ಬದಿಗೆಳೆದು ಉಣಿಸುವೆ...............
ನನ್ನ ಮಗಳೆಂದು ಎಲ್ಲರಲ್ಲೂ ಹೇಳುವೆ ನಾನು ಮಾಡಿದ ಚಿತ್ರವ ತೋರಿ ನನ್ನ ಮಗಳ ಕಲೆನೋಡಿ ಎಂದು ನೀನು ನಲಿಯುವೆ...................
ಕೆಲಸದಿಂದ ಬರಲು ನೀನು ಓಡಿಬರುವೆ ದಿನಾಲು ನಾನು ನಿನ್ನ ಬಿಗಿದಪ್ಪಿ ಅಪ್ಪ ಎಂದು ಕರೆಯಲು.......
ಲಡ್ಡು ಮಿಠಾಯಿ ಕೊಂಡುತರುವೆ ನನ್ನ ಮುದ್ದು ಗೊಂಬೆಗೆ ಪುಟ್ಟದೊಂದು ಬೊಂಬೆಯೆಂದು ಕೊಡುಗೆ ನನಗೆ ನೀಡುವೆ...............
ಅಪ್ಪ ಅಪ್ಪ ಎಷ್ಟು ಕರೆದರು ನಿನ್ನ ಹೆಸರು ಮುದ್ದು ನನಗೆ ನೀನು ಅಪ್ಪ ನಿನ್ನ ತೊಡೆಯ ಮೇಲೆ ಮಲುಗಿದರೆ ಯಾವ ನೋವು ತಿಳಿಯಲ್ಲ ನಾಳಿನ ಚಿಂತೆ ನನಗಿಲ್ಲ............
ಅಮ್ಮ ನನಗೆ ಜೀವಕೊಟ್ಟು ಅವಳು ಉಸಿರು ನಾನೆಂದರೇ..............
ನಿನ್ನ ಕೈಗೆ ನನ್ನ ಕೊಟ್ಟ ಕ್ಷಣದಿಂದ ನೀನೇ ನನ್ನ ಉಸಿರು ಅಪ್ಪ................
- ಚುಕ್ಕಿ
18 Jun 2017, 02:55 pm
Download App from Playstore: