ನಮ್ಮನೆ ದ್ಯಾವ್ರು

Wish you happy Fathers day
___________________

ನಿನ್ ಹೆಗ್ಲ್ ಮ್ಯಾಲೆ ಕೂರಿಸ್ಕೊಂಡು
ತೋಳಿನ್ ಮರೇಲಿ ಮಲ್ಗಿಸಿ
ಬರೇ ಉಪ್ಪು ಮೆಣಸಿನ್ಕಾಯಿ ಗೊಜ್ಜ್ಗಾಲಿ
ಹಾಲು ತುಪ್ಪ ತಿಂದಂಗ್ ತಿನ್ಸಿ
ನಮ್ನ್ ಬೆಳ್ಸಿ ಸಾಕಿದ್ ನನ್ನಪ್ನೇ
ನೀನ್ ನಮ್ಮನೆ ದ್ಯಾವ್ರು

ನನ್ನಪ್ಪ್ನೇ ನೀನು ಕಲ್ಬಾವಿ ಕಬ್ಬಿನ್ಗದ್ದೆ
ಸಂಪಾರ್ಸ್ದಿದಿದ್ರೂ
ಆದ್ರೂ ಅದೇಟ್ ಕಷ್ಟ್ವ ಬಂದ್ರು
ಅದನ್ನ್ ಬೇವಿನ ಕಷಾಯ ಕುಡ್ದಂಗೆ
ಗಟ ಗಟನೇ ಕುಡ್ದು
ನಮ್ಗೆಲ್ಲಾ ಬೆಲ್ದ್ ಪಾನ್ಕ
ಕುಡಿಸಿದ್ ಮಾರಾಯ ನೀನು

ಹೊಲ್ದಾಗ್ ಬೆಂದ್
ಮನೇಗ್ ನೊಂದು
ಬಾಳ್ನಾಗ್ ಕಷ್ಟ್ಗಳು
ನಿನ್ಗೇ ಆಕಾಸ್ದಾಗಿರ ಸುಕ್ಕಿಗ್ಳಂಗಿದ್ರು
ಮುಗಿಲ್ ಮ್ಯಾಗಿನ್ ಚಂದ್ರ್ನಂಗೆ
ಮಿನುಗ್ದೋನ್ ನೀನು

ಅವತ್ತಿನ್ ಬಂದ್ಗಳ್ಳಿ ಅಂತಾ ಬದುಕ್ನಾ
ಇವತ್ ಮಲ್ಗೆ ಹೂಬಳ್ಳಿ
ಮಾಡ್ದೋನ್ ನೀನು
ನಮ್ಮನೆ ಸಂಸಾರದ್ ಬಂಡಿಗೆ
ಕಡಾಣಿಯಾಗಿ
ನಿನ್ ಸಂತೋಸ್ವ ಕಡಿಕ್ ಸರ್ಸಿ
ಮಕ್ಳುಗಾಗೆ ನಿನ್ ಜೀವ್ನಾನ
ಗಂಧ ತೇದ್ದಂಗೆ
ತೇದ್ದೋನ್ ನೀನು

ನಿನ್ ಪಿರೀತಿ
ಆಕಾಸ್ದಷ್ಟೇ ಇಸ್ರಾಮು
ನಿನ್ ಮಮ್ಕಾರ ಅಂತೂ
ಹಾಲ್ ತುಂಬಿರಾ ಸಮುದ್ರ್ದಂಗೆ

ನಿನ್ ಈ ಮಮ್ಕಾರಕ್ಕೆ
ಋಣಿಯಾಗಿರ್ತೀನಿ
ನಿನ್ನ್ ಎದ್ಯಾಗ ತುಸು
ಸೂರ್ ಕೊಡು ನನ್ನಪ್ನೇ

- ಪ್ರಕುಲ್

18 Jun 2017, 07:30 pm
Download App from Playstore: