ನನ್ನ ಒಂದು ಕ್ಷಣ ಬಿಟ್ಟು
ಹೋಗುವುದಾದರೆ................
ಒಂದು ಕ್ಷಣ ನನ್ನ ಬಿಟ್ಟು ಹೋಗುವುದಾದರೆ
ಹೇಳಿಹೋಗೋ ನಿನ್ನ ನೆರಳಿಗೆ ನನ್ನವಳ ಜೊತೆಗಿರು ನೇರಳೆ ಅವಳು ಒಂಟಿಯಾಗುವಳೆಂದು...................
ನೆನೆದು ನೆನೆದು ಆ ಒಂದು ಕ್ಷಣ ನಿನ್ನ ಮಾತನು ನನ್ನ ನಾನು ಮರೆತೊಗುವೆ ನಿನ್ನಲ್ಲಿ................
ಕಪ್ಪಾದರು ನಿನ್ನ ನೆರಳು ಕಾಣುವೆ ನಾನು ಅದರಲ್ಲಿ ನಿನ್ನ ಮುದ್ದಾದ ನಗುವನ್ನು.................
ನೀನೇ ನನ್ನೊಡನೆ ಇರುವೆಯೆಂದು ನೆನೆದು ಮಾತನಾಡುವೆ ,ಆಟವಾಡುವೆ, ನಗುವೆ ಅಳುವೆ
ಕೋಪಿಸಿಕೊಳ್ಳುವೆ ,ಸ್ನೇಹಿತಳಾಗುವೆ ಪ್ರೇಯಸಿಯಾಗುವೆ................
ನನ್ನಲ್ಲಿನ ನಿನ್ನನ್ನು ಆ ನೆರಳಿಗೆ ತೋರಿಸುವೆ
ನಿನ್ನಲ್ಲಿ ನಾ ನೋಡಿದ ನನ್ನ ಮೇಲಿನ ಪ್ರೀತಿಯ ಭಾವನೆಗಳನ್ನು ಒಂದೊಂದು ಬಣ್ಣವಾಗಿ ಬದಲಿಸಿ
ನಿನ್ನ ನೆರಳಿಗೆ ರೂಪ ಕೊಡುವೆ ನಿನ್ನನ್ನಾಗಿ ಮಾಡಿ ನನ್ನ ಎದೆಯಲ್ಲಿ ಬಚ್ಚಿಡುವೆ ಎಲ್ಲಿಗೂ ಹೋಗದಂತೆ ನಿನ್ನ ಕಟ್ಟಿ ಹಾಕುವೆ....................
- ಚುಕ್ಕಿ
18 Jun 2017, 08:52 pm
Download App from Playstore: