ತುಂತುರು / ಸೆಳೆತ
ಕುಡಿ ನೋಟಕೆ ಶರಣದೆ ನಾ
ಮೊದಲ ಪ್ರೇಮದ ಸಂಚಲನ
ಮೈಯೆಲ್ಲ ರೋಮಾಂಚನ
ಕಾಡುವೇ ನೀ ಅನುಕ್ಷಣ
ನಡೆಸಬೇಕಾಗಿದೆ ನಿನ್ನೊಡನೆ
ಜೀವನದಲಿ ಒಲವಿನ ಪಥಸಂಚಲನ
ಅಂಗೈಯಲಿಟ್ಟು ನಿನ್ನ ಹೆಜ್ಜೆ ನಡೆಸುವೆ
ನಿನ್ನ ಮುದ್ದಿಸಿ ನಾ ಬೀಗುವೆ
ಕನಸಿನ ಲೋಕದ ಕಿನ್ನರಿ ನೀನು
ನನ್ನೆದೆಯ ಆಗಸದ ಬೆಳದಿಂಗಳೆ
ಧನ್ಯಾಗಿಸು ಗೆಳತಿ ನನ್ನ ಪ್ರೇಮಿಸಿ
ಆಲಿಸು ನನ್ನ ಎದೆ ಬಡಿತ ನನ್ನೆದೆಗೆ ಒರಗಿ .
ಕಣ್ಣಲೆ ಕರಗುತಿದೆ ಇರುಳು
ಹಗಲರಿದರೆ ನಿನ್ನೋಲವಿನ ಅಮಲು
ಬೇಡವಾಗಿದೆ ಯಾರ ಒಡನಾಟ ಇನ್ನೂ
ಬೇಡುವೆ ನಾ ಕೇವಲ ನಿನ್ನನು.
ಏಕಾಂಗಿ ನನಗೆ ಏಕಾಂತ ಸನಿಹ
ಬೇಕಿಲ್ಲ ಯಾರು ನಿನ್ನ ವಿನಹ
ಆಡಿ ಕಾಡದಿರು ಕನಸಲಿ
ಬಂದು ನೆಲೆಸು ನೀ ನನ್ನ ಜೀವನದಲಿ .
- Chandni
18 Jun 2017, 11:39 pm
Download App from Playstore: