ಹಾರೈಸುವೆ ನಾ ನಿನ್ನ ಮಗುವೆ!
ಬೆಳೆದು ನಿಂತ ಹೆಮ್ಮರವು ನಾನು
ಅರೆ - ಕಾಲ ಒಣಗಿದರೇನು
ಚಿಗುರೊಡೆಯಬಲ್ಲೆನು
ಇಂದಲ್ಲ- ನಾಳೆ........
ನನ್ನಿಂದ ಬಿದ್ದ ಬೀಜವು ನೀನು
ಮೊಳಕೆ ಒಡೆಯಬೇಕಲ್ಲವೇನು
ನಿನ್ನ ರಕ್ಷಣೆ ನನ್ನ ಹೊಣೆಯಲ್ಲವೇನು
ನೀ ನೆರಳಾಗಬೇಕು ಇಳೆಗೆ......
ನೀ ಬೆಳೆಯಬೇಕು
ಜಗದೊಡೆಯನಾಗಿ
ನಾ ಅದ ನೋಡಬೇಕು
ತನ್ಮಯಳಾಗಿ.......
ನಾ ಕಟ್ಟಿಡುವೆ ನಾ ಕಂಡ ಕನಸುಗಳೆಲ್ಲವ ,ತಾತ್ಕಾಲಿಕವಾಗಿ
ನಿನಗಾಗಿ ಮಗುವೆ......
ಆಸರೆಯಾಗು ಅನಾಥರಿಗೆ
ಪೋಷಿಸುವನಾಗು ಪ್ರತಿಭೆಯುಳ್ಳವರನ್ನು
ಸತ್ಪ್ರಜೆಯಾಗು ಇಳೆಗೆ
ಆದರೆ,ದೋಚುವನಾಗದಿರು
ಸೂರ್ಯ- ಚಂದ್ರ ರಿರುವವರೆಗು!
ಶಾರಧ
- ಶಕುಂತಲಾ
19 Jun 2017, 06:24 pm
Download App from Playstore: