ನೀ ಕೊಟ್ಟ ಉತ್ತರ.........

ನೆನೆಯದಿರು ನನ್ನ ದಿನನಿತ್ಯ
ಬಿಡುವಿಲ್ಲದೆ ಗೆಳೆಯಾ.........

ನೀ ನೆನೆದ ಕ್ಷಣ ಗಾಳಿಯಲ್ಲಿನ
ನಿನ್ನ ಪ್ರೀತಿ ಬಡಿದೆಬ್ಬಿಸುವುದು
ನನ್ನ ನಿನ್ನ ನೋಡುವ ಬಯಕೆಯಾಗಿದೆ
ಗೆಳತಿ ಎಂದು................

ನನ್ನಲ್ಲಿನ ನಿನ್ನನ್ನು ಕೇಳುವೆ ನಾನು
ಅವಗವಾಗ ನನ್ನಲ್ಲಿ ನೀನು
ನೆಮ್ಮದಿಯಾಗಿ ಇರುವೆಯಾ ಎಂದು......

ನೀ ಕೊಟ್ಟ ಉತ್ತರ ಕೇಳಿ
ಸ್ತಬ್ಧಳಾದೆ ನಾನು.............
ನಾನಿರುವುದೇ ನಿನ್ನಲ್ಲಿ ಅಂದಮೇಲೆ
ನಿನ್ನ ನಗುವೇ ನನ್ನದಲ್ಲವೇ
ನಿನ್ನ ನೋವು ನನಾಗಿಲ್ಲವೇ ಗೆಳತಿ ಎಂದು.........

- ಚುಕ್ಕಿ

19 Jun 2017, 09:20 pm
Download App from Playstore: