ಚಿನ್ಮಯಿ
ಸೊಗಸಾದ ಮಂದಹಾಸದ ಮಧುವನದಲ್ಲಿ
ಬೊಗಸೆ ತುಂಬಾ ಮಲ್ಲಿಗೆ ತುಂಬಿ ನಿನ್ನ ಜೀವನದ ಆದಿಯಲ್ಲಿ ನಗುವಾಗಿ ಚೆಲ್ಲುವೆ ಚಿನ್ಮಯಿ........
ನಿನ್ನ ಪಾದವಿಟ್ಟ ಪ್ರಾತಿ ಹೆಜ್ಜೆಯೂ ಸದಾ
ಸಂತೋಷ ನೆಮ್ಮದಿಯಿಂದ ಕೂಡಿರಲಿ........
ನನ್ನ ಹೃದಯದಲ್ಲಿನ ಗುಲಾಬಿ ನೀನು
ಬಾಡದಿರು ಮುಂಬರುವ ಅಡೆತಡೆಗಳಿಗೆ ...............
ಹೆತ್ತ ತಾಯಿಯ ಮುದ್ದು ಮಗುವೇ
ಸಂಗಡಿಗರ ಅಚ್ಚುಮೆಚ್ಚಿನ ಸ್ನೇಹವೇ
ಹರುಷದಾಯಕವಾಗಿ ಸಾಗಲಿ ಪ್ರತಿನಿತ್ಯ ನಿನ್ನ ನಗುವಲ್ಲಿ.................
ನಗು ನಗುತಲಿ ಮುಂದೆ ಸಾಗು ನಗುವಂಚುತಲಿ
ಎಲ್ಲರ ಮನ ಗೆಲ್ಲುವ ಚಿನ್ಮಯಿಯಾಗು.........
ಹುಟ್ಟುಹಬ್ಬದ ಶುಭಾಶಯಗಳು
ಚಿನ್ನು............
- ಚುಕ್ಕಿ
20 Jun 2017, 07:21 am
Download App from Playstore: