"ಓಡಿ ಬಾ ಗೆಳತಿ"

ಬಂಧನಗಳ ಒಗೆದು,ದೂರಗಳ ಅಗೆದು
ಭಾವಗಳ ಭುವವೇರಿ ಹಾರಿ ಬಾ ಬಳಿಗೆ
ಬಾಂಧವ್ಯ ಅರಿತು, ಕಾಲಾಂತರ ಮರೆತು
ಆತ್ಮ ಶ್ರುತಿಗೆ ಕಿವಿಯಿಟ್ಟು ಓಡಿ ಬಾ ಗೆಳತಿ

ನೀ ಬರುವೆಯೆಂದು ಕಾದಿರುವೆನಿಂದು
ಮನದ ಅಂಗಳ ಗುಡಿಸಿ ಮನೆಯಂಗಳ ತೆರೆದಿರಿಸಿ
ಹೃದಯ ಬಾಗಿಲ ಎದುರು ದೀಪಗಳ ಉರಿಸಿ
ಆತ್ಮದಾರತಿ ಬೆಳಗಿ ,ಪ್ರೀತ್ಯಾದಾರಗಳ ಹರಸಿ

ಕಾಡುಗಳ ಕಡೆದು ಬಾ,ನಾಡುಗಳ ನೆಗೆದು ಬಾ
ಮೋಡಗಳನೇರಿ ಬಾ, ದಿಕ್ಕುಗಳ ತೊರಿ ಬಾ
ಬೆಳಕಿನ ಕಿರಣಗಳ ನೂಲೇಣಿ ಹಿಡಿದು ಬಾ
ಅಲ್ಲಿಂದ ಇಲ್ಲಿನ ನೇರಕ್ಕೆ ಜಿಗಿದು ಬಾ

- ಹೇಮಚಂದ್ರ

20 Jun 2017, 02:04 pm
Download App from Playstore: