ಆಕಾಶ ರೇಖೆ
ಸ್ವಚ್ಛಂದ ಆಕಾಶ ರೇಖೆ
ಮಿಂಚೊಮ್ಮೆ ಮರೆಯಾದುದೇಕೆ!!
ಆ ಚುಕ್ಕಿ ಆ ಚಂದ್ರಗೆ ಇಂದು
ನನ್ನಲ್ಲಿ ಹುಸಿ ಮುನಿಸು ಏಕೆ!!
ತಂಗಾಳಿ ಜೊತೆಯಲ್ಲಿ ಏಕೋ
ಆ ಮೋಡಕೆ ಹೊಸದಾಗಿ ಒಲವು!!
ಕರಗಿ ಸುರಿದಿರಲು ಮಳೆ ಹನಿಯು
ಧರೆಯಲ್ಲಿ ತಂಪಾದ ಚೆಲುವು!!
ಚಿಗುರು ಹಸಿರೆಲೆಗಳಿಗೂ ಇಂದು
ಸರಿಗಮಗಳ ನುಡಿಸಿದ ಆನಂದ!!
ಕಾದಿರುಳ ಕರಿ ನೆರಳ ಈ ಗಳಿಗೆ
ಮಳೆ ಹನಿಗಳ ಚಟ ಪಟ ತರು ಲತೆಗೆ!!
ಮನ ತುಂಬಿ ಮೈದುಂಬಿ ಆನಂದ
ಈ ಹನಿಗಳ ಜೊತೆ ಚಲ್ಲಾಡಿದೆ ಅಂದ!!
ಆ ಮೋಡ ತಾ ಕರಗಿ ಮಳೆಯಾಗಿ
ಸುರಿದಿರಲು ಎಲ್ಲೆಲ್ಲೂ ಆನಂದ!!
- ಪಿ.ಜಿ.ಜ್ಯೋತಿ
20 Jun 2017, 06:29 pm
Download App from Playstore: