ದಿನ ರಾತ್ರಿಯ ನೆನಪು
ದಿನ ರಾತ್ರಿ ನಾ ಮಲಗಿರಲು
ನನ್ನನ್ನು ಎಬ್ಬಿಸಿ
ಹಗಲುಗನಸಿಗೆ ಬಾ ಎಂದು
ಕರೆಯುವುದು ನಿನ್ನ ನೆನಪು!!
ರಾತ್ರಿ ನಿದ್ದೆಯಲ್ಲಿರುವಾಗ
ತಿಗಣೆ ಕಾಟದ ಬಾಧೆಯನ್ನಾದರೂ
ಸಹಿಸಬಹುದು ಆದರೆ
ನಿನ್ನ ನೆನಪಿನ ಬಾಧೆಯನ್ನಲ್ಲ!!
ನಿನ್ನ ನೆನಪಿನಲ್ಲಿ ನಾ
ಅದೆಸ್ಟೋ ರಾತ್ರಿಗಳನ್ನು ಕಳೆದಿರುವೆ
ಆದರೆ ಇಂದೇಕೋ ಮನ
ನಿನ್ನ ತುಂಬಾ ಹಂಬಲಿಸುತ್ತಿದೆಯಲ್ಲ!!
- ಪಿ.ಜಿ.ಜ್ಯೋತಿ
21 Jun 2017, 04:35 am
Download App from Playstore: