ಸೀತೆಯ ತುಮುಲ ಬಲ್ಲವರಾರು..?
ಲಕ್ಷ್ಮಣ ರಕ್ಷಿತ ಲಕ್ಷ್ಮಣ ರೇಖೆಯ
ದಾಟುವ ಮುನ್ನ...
ಓ ಸೀತೆ..!
ಹೇಳು ನೀ ಆ ಕ್ಷಣಗಳ ಮನಸಿನ ತುಮುಲವ...
ರೇಖೆಯ ಮಹಿಮೆ ಅರಿತೂ ದಾಟಿದೆಯಾ ?
ಭಿಕ್ಷೆ ನೀಡಿ ಪುಣ್ಯ ಪಡೆಯುವ ಬಯಕೆಯಾ ?
ಅಥವಾ..
ಧರ್ಮಪಾಲನೆಯ ನಿಯಮಕೆ ಸಿಲುಕಿದೆಯಾ ?
ಭಿಕ್ಷೆ ಬೇಡಲು ಬಂದ ಕಾಮರೂಪದ
ಸೂಕ್ಷ್ಮ , ಸುಳಿವು ಕಾಣದೆ ಹೋದೆಯಾ ?
ಅಥವಾ..
ರಾಮ ನಾಮದ ಮಹಿಮೆ ತಿಳಿಯೆಯಾ ?
ಅರಿವ ಗುರು ಲಕ್ಷ್ಮಣನ ಮೇಲೆ ಅನುಮಾನವಾ ?
ಅಥವಾ..
ನಿನ್ನ ನೀ ಮರೆತೆಯಾ ?
ಹೇಳು ನೀ ಸೀತೆ ?
ಲಕ್ಷ್ಮಣ ರೇಖೆಯ ದಾಟುವ
ಆ ಕ್ಷಣಗಳ ಮನಸಿನ ತುಮುಲವ...
- Indushekar Chinivar
21 Jun 2017, 10:01 am
Download App from Playstore: