ದೂರ
ನೀನಿನ್ನ ಹೊಗಬೇಡ ದೂರ
ಕಡಿದೆನ್ನ ಮನಸಿನ ದಾರ
ನಿ ಹೀಗೆ ತೊರೆದರೆ ಊರ
ನನಗಿನ್ನಾರು ಆದಾರ
ಬರಬೇಕೆಂದು ನಿ ಹೊದ ದೂರ
ನನ್ನ ಕಣ್ಣಿಗೆ ಬಂದಿದೆ ಬಾರ
ಇನ್ನು ಕಣ್ಣಲ್ಲಿ ಕಣ್ಣಿಟ್ಟು ಯಾರ
ಕೊರಳಲ್ಲಿಡುವೆ ನಾ ಮುತ್ತಿನ ಹಾರ?
ನಿನ್ನ ಹುಡುಕುತಾ ನಾ ಬಂದಾಗ
ನನ್ನ ನಿ ಹಿಂದೆ ಕಳುಹಿಸು ಬೇಗ
ತುಂಬಿದ ಕಣ್ಣ ಸೆರಗಲ್ಲೊರಿಸಿ
ನಸುನಕ್ಕಿದೆ ನೊವನು ಮರೆಸಿ
- ಹೇಮಚಂದ್ರ
21 Jun 2017, 12:11 pm
Download App from Playstore: