ದೃಷ್ಟಿಕೋನ
ಲೋಕವೆಲ್ಲಾ ಕೆಟ್ಟದೆಂದು ಕಪ್ಪಾಗಿ ನೋಡುವ
ಬದಲು ನಿನ್ನ ಕಣ್ಣಲ್ಲಿ ನೆಲೆಯಾಗಿರುವ
ಬಿಳುಪನ್ನು ನೋಡು ಮೊದಲು............
ಅದರಲ್ಲೇ ಕಲ್ಮಶವಿಲ್ಲವೆಂದ ಮೇಲೆ
ನಿನ್ನ ದೃಷ್ಟಿ ದೋಷ ತಿಳಿದು ಬದುಕು
ಮನದಲ್ಲಿನ ಕಲ್ಮಶಗಳನ್ನು ಕಿತ್ತುಹಾಕು........
ಬಂಡೆಕಲ್ಲುಗಳಿರುವ ಬರಡು ಭೂಮಿ ಎಂದು ನೋಡುವ ಬದಲು ಅದರಲ್ಲಿ ಜೀವ ಪಡೆದುಕೊಂಡಿರುವ ಪುಟ್ಟಗಿಡಗಳನ್ನು ನೋಡು ಯಾರ ಮೇಲೂ ಆಧಾರವಾಗದೆ ಅವು ಬೆಳೆದು ಮರವಾಗುವ ಶೈಲಿಯ ನೋಡು............
ಸಮುದ್ರದಲ್ಲಿನ ಉಪ್ಪುನೀರು ನಿರುಪಯೋಗ
ಎನ್ನುವ ಬದಲು ಆ ಸಾಗರದಿಂದ ಪಡೆದ ಉಪ್ಪು ಬೆರೆಸಿ ಮಾಡುವ ನೂರು ರುಚಿಕರವಾದ ಅಡಿಗೆಗಳನ್ನು ನೋಡು...................
ಜೀವನ ನೀನು ನೋಡಿವ ದೃಷ್ಟಿಕೋನದಿಂದಲೇ
ನಿನ್ನನ್ನು ನೋಡುತ್ತದೆ.........................
ಒಳ್ಳೆಯ ಆಲೋಚನೆಗಳನ್ನು ಮಾಡು ಒಳ್ಳೆಯ ಕೆಲಸಗಳನ್ನು ಮಾಡು ನಿನ್ನ ಸುತ್ತಲಿನ ಸಮಾಜವೂ
ನಿನ್ನ ಒಳ್ಳೆಯ ವ್ಯಕ್ತಿಯಾಗಿ ಗುರ್ತಿಸುತ್ತದೆ ನಿನಗೆ ಒಳಿತನ್ನು ಬಯಸುತ್ತದ್ದೆ...........
- ಚುಕ್ಕಿ
21 Jun 2017, 03:11 pm
Download App from Playstore: