ಕಣ್ಣೀರು ಪ್ರೀತಿಸದ ಮೌನ

ಮನಸಿನಲ್ಲಿ ತುಂಬಿರುವ ಕಠೋರವಾದ ಮೌನ ಉಳಿಸಿತು ನನ್ನಲ್ಲಿ ಅಳಿಯಾದ ಅಳುವನ್ನು.........

ಕೇಳಿ ಕೇಳಿ ಈ ಮೌನದ ಕರ್ಕಶವಾದ ಧ್ವನಿಯನ್ನು
ಮಾತಿನ ಮಾತನು ಕೇಳುವ ತಾಳ್ಮೆಯೇ ಇಲ್ಲದಾಯ್ತು ನನ್ನಲ್ಲಿ.................

ಯಾಕೇ ಮೌನವೇ ನೀನಿಗ ಮೌನಿಯಾದೆ ನೀನು ನನ್ನ ಮಾತನ್ನು ನುಂಗಿ ....................

ನನಗೆ ಕೊಟ್ಟ ಹಿಂಸೆ ಸಾಲಲಿಲ್ಲವೇ ನಿನಗೆ ನೆಮ್ಮದಿಯಾಗಿ ನೀ ನಿದ್ರಿಸಲೂ ನನ್ನ ನಿದ್ದೆಯೂ ಕೆಡಿಸುತ್ತಿರುವೆಯಲ್ಲಾ.............

ತಲೆಯ ಮುಟ್ಟಿನೊಡೆ ಅದರಲ್ಲಿನ ನರ-ನಾಡಿಗಳು
ತಮ್ಮ ರಕ್ತದ ಚಲನವಲನವನ್ನು ನಿಲ್ಲಿಸಿ ನನಗೆ ನೋವು ಕೊಟ್ಟು ನರಕ ತೋರುತ್ತಿವೆ ನಿನ್ನ ಜೊತೆಗೂಡಿ................

ನೂರು ಶಬ್ದಗಳನ್ನು ಕೇಳುತ್ತಿದ್ದರು ನನ್ನ
ಬಿಡದೆ ಕಾಡುತ್ತಿರುವೆ ನೀನು...........
ನನಗಂತೂ ತಿಳಿದಿಲ್ಲ ನಿನ್ನಿಂದ ತಪ್ಪಿಸಿಕೊಳ್ಳುವ ದಾರಿ ಏನಿದೆ ಎಂದು.............

ಕಣ್ಣೀರಿಗೂ ನಿನ್ನ ಮೇಲೆ ಪ್ರೀತಿಯೇ ಇಲ್ಲದ ಮೇಲೆ ಹೇಗೆ ಇಡಬೇಕು ನಿನ್ನ ನನ್ನೊಳಗೆ ಹೇಳೇ ಮೌನವೇ ನಿನ್ನಲ್ಲಿ ಏತಕೆ ಈ ಮೌನ................

- ಚುಕ್ಕಿ

21 Jun 2017, 04:08 pm
Download App from Playstore: