ಅಲೆದಾಟಗಳು.........
ಜಂಜಾಟಗಳು.........
ಪರಿಶೀಲನೆಯಲ್ಲೆ ಮುಗಿಯುವುದು
ನಾಡಿನ ಬರಗಾಲ.....
ಪರಿಹಾರ ಘೊಷಣೆಯಲ್ಲೆ ಮುಗಿಯುವುದು ಮಳೆಗಾಲ.......
ಇದ ಪಡೆಯಲು ಜೀವನವೇ
ಮುಗಿಯುವುದು ಅಲೆದಾಟದಲ್ಲಿ.....
ಇವರನ್ನು ಕೆಳಲು,ಅವರಲ್ಲಿಗೆ
ಅವರನ್ನು ಕೇಳಲು, ಇವರಲ್ಲಿಗೆ
ತಿರುಗಿಸುತ್ತಾ......ಮಾಡುವರು
ಇರಿಸು- ಮುರಿಸು ಪಡೆಯುವಲ್ಲಿಗೆ
ಎಲ್ಲಿಗೋದರು ಇಲ್ಲ ಎಂಬ
ನುಡಿ ಕೇಳಲು, .......
ಜನಿಸಿತು ಸಂಶಯದ ಗೂಡು
ಎಲ್ಲಿಗೋಯಿತು.........
ಆಯಿತೆ ಮೂಷಿಕನ ಪಾಲು....
ಹುಡುಕಲು ಅದರ ಜಾಡು
ದೊರೆಯಿತು ತಿಮಿಂಗಿಲಗಳ ಗೂಡು...
ಬೇಡುವ ಕೈಗಳು ನೂರಾರು
ನೀಡುವ ಕೈಗಳು ಕೆಲವಾರು
ದೋಚುವ ಕೈಗಳು ಸಾವಿರಾರು
ರಕ್ಷಿಸುವರು ಇದರಡಿ ಮರೆಯಾದರು!
ನೀಡುವ ರೈತ ಶಾಪವ
ಪಡೆಯಲಾಗದೆ ಹಿಡಿ ಅನ್ನವ
ನೀಡುವವರಾರು ಮರುಜನ್ಮವ!!
ಅರಿಯಲಾಗದು ಜಗದ ಮರ್ಮವ!!
ಶಾರಧ
- ಶಕುಂತಲಾ
21 Jun 2017, 04:13 pm
Download App from Playstore: