ಪ್ರೇಮದ ಶ್ವೇತಾಂಬರಿ

ಓ ಪ್ರೇಮದ ಶ್ವೇತಾಂಬರಿ
ನೀ ಬಾಳಿನ ಕಾದಂಬರಿ!!

ಮುಂಗುರುಳು ತೂಕಡಿಸುವ
ಮಗುವಂತಿದೆ
ಆ ಮಗುವೀಗ ಇರುಳಲ್ಲಿ
ನನ್ನ ಕೆಣಕಿದೆ!!

ಈ ಪ್ರೀತಿಯ ಹೊಸ ಆಸೆಯ
ಚಪ್ಪಾಳೆಗೆ
ಕಣ್ಣ ರೆಪ್ಪೆಯು ಒಪ್ಪಿಗೆಯ
ತಾ ನೀಡಿದೆ!!

ಓ ಪ್ರೇಮದ ಶ್ವೇತಾಂಬರಿ
ನೀ ನನ್ನಯ ಕಾದಂಬರಿ!!

ಹುಸಿ ಮುನಿಸಿನ ಸವಿನುಡಿಗಳ
ಒಡನಾಟಕೆ
ಮಿತಿ ಮೀರಿದ ಒಲವಿಂದು
ನನ್ನ ಕಾಡಿದೆ!!

ಸಂಭ್ರಮಿಸುವ ಈ ನಮ್ಮಯ
ಸಮ್ಮಿಲನಕೆ
ಮುಗಿಲೇರಿರೋ ಆ ಚಂದ್ರನ
ಸಾಕ್ಷಿ ಇದೆ!!

- ಪಿ.ಜಿ.ಜ್ಯೋತಿ

21 Jun 2017, 05:25 pm
Download App from Playstore: