ಬಾಳೆಯ ಬನ

ಬಾಳೆಯ ಬನದಲ್ಲಿ
ಮಂಗಗಳ ಕಾದಾಟ!!
ಇದ್ದ ಒಂದು ಬಾಳೆ ಕೊನೆಗೆ
ತಮ್ಮಲ್ಲೇ ಎಳೆದಾಟ!!

ರೆಂಬೆ ಕೊಂಬೆಗಳಲ್ಲಿ
ಜೋತು ಆಡುವ ಮಂಗ!!
ಬಾಳೆ ಬನದಲಿ ನುಗ್ಗಿ
ತಂತು ಗಿಡಗಳಿಗೆ ಬಂಗ!!

ತಾನೆಂದು ತನದೆಂದು
ಅದಕೇನೋ ಚಲ್ಲಟ!!
ಮುರಿದಿರಲು ಬಾಳೇ ಗಿಡವು
ಮಾಲಿಕನ ಪರದಾಟ!!

- ಪಿ.ಜಿ.ಜ್ಯೋತಿ

21 Jun 2017, 05:45 pm
Download App from Playstore: