ಕಾದಿರುವ ಮಲ್ಲಿಗೆ
ನಾ ಮುಡಿದ ಮಲ್ಲಿಗೆಯು
ಬಾಡದೇ ಅರಳಿದೆ ಇಂದು!!
ನೀ ಬರುವ ದಾರಿಯನ್ನು
ಕಾಯುತಲಿಹುದು ತಾ ನಿಂದು!!
ಘಮಿಸಿ ಪರಿಮಳವ ತಾನು
ಒಂದೇ ಸಮನೆ ಹರಿಸುತಲಿಹುದು!!
ಸಂಜೆ ಸೂರ್ಯ ಮುಳುಗಿದರೂನು
ಮಂದಹಾಸ ಬೀರುತಲಿಹುದು!!
ಶಿರವನ್ನೇರಿ ಕಿರೀಟದಂತೆ
ಶುಭ್ರ ಶೋಭೆ ಬೀರುತಲಿಹುದು!!
ಒಂದೇ ಸಮನೆ ಕಾಯುತಲಿಹುದು
ನೀ ಬರುವ ದಾರಿಯನ್ನು ಇಂದು!!
- ಪಿ.ಜಿ.ಜ್ಯೋತಿ
21 Jun 2017, 05:45 pm
Download App from Playstore: