ಹೇ ಪತಿ ನಾ ನಿನ್ನ ಸತಿ.....

ಸೋತು ಹೋಗಲೇನು
ಮತ್ತೊಮ್ಮೆ ಶರಣಾಗಿ ನೋಡಲೇನು
ಆಗುವುದೆ ಬದುಕು ಹಾಲುಜೇನು?
ಬಾಳಲಿ ಕಂಡ ಸರಸ ವಿರಸ
ಕಲಿಸುವುದೆ ಜೀವನದಲಿ ಸಮರಸ
ಹೇಳು ಓ ನನ್ನ ಪ್ರಿಯ ಅರಸ

ಬಂದಿಲ್ಲ ಹೊತ್ತು ಒಡವೆ ವಸ್ತ್ರದ ಲಾಲಸೆ
ಹೊರಟು ಬಂದಿರುವೆ ನಿನ್ನನೆ ನಂಬಿ‌ ಬಹುದೂರ ‌ವಲಸೆ
ನೀ ಪ್ರೀತಿಯಲಿರಲು ಅರಮನೆ ನನಗೆ ನಿನ್ನ ಮನಸೆ
ಯಾತಕೆ ತೋರುವೆ ನನ್ನಲಿ ಬೇಡದ ವರಸೆ
ನಾನೆ ಬಾಡಿ‌ ಹೋದರು ‌ಕಾಣದೆ ನಿನಗೆ ನನ್ನ ಕನಸೆ
ಅರ್ಥವಿಲ್ಲದ ಬದುಕ ನೀ ಕೊಟ್ಟರೆ ನಾನೆಂದು ನಿನ್ನ ಮನ್ನಿಸೆ

ನಿನಗೆ ನಾನೆನಿಸಿದನೆ ಕೇವಲ ಹೆಂಡತಿ
ನನಗಿಲ್ಲವೆ ಜಾಗ ಆಗಿ ಮನಸಿಗೆ ಒಡತಿ
ಯಾತಕೆ ಹೀಗೆ ಹೆಂಡತಿಯ ನೀ‌ ಕಾಡುತಿ
ನಿನಗೇನೆ ಅನಿಸುವುದೆ ಇದು ನ್ಯಾಯದ ರೀತಿ
ನನಗೂ ಇರುವುದು ಕಾಡಲು ಒಂದು ಸರತಿ
ನಾನೂ ಹಾಗೆ ಕಾಡಿದರೆ ನೀನೇಗೆ ಉಳಿತಿ
ನೋಡಲಾರೆ ನಿನಗೆ ಬಂದರೆ ಅಂಥ ಸ್ಥಿತಿ

‌ಕಾಯುತಿರುವೆನು ಉಸಿರಿಡಿದು ಕಾಣಲು ನಿನ್ನ ಪ್ರೀತಿ
ಬಂದು ಸೇರು ಕಳೆದು ನನ್ನ ಮನಸೊಳಗಿನ ಭೀತಿ
ಇಂತಿ ನಾ ನಿನ್ನ ಪ್ರೀತಿ ಬಯಸಿ ಕಾಯುತಿರುವ ಸತಿ....
ತಿರಸ್ಕರಿಸದೆ ಸೇರೊ ಮನಸ ನನ್ನ ಪ್ರೀತಿಯ ಪತಿ....

- ಶ್ರೀಕಾವ್ಯ

23 Jun 2017, 11:15 pm
Download App from Playstore: