ಈದ್ ಸಂಭ್ರಮ
ಅದೋ.. ಅಲ್ಲಿ ನೋಡು
ಶವ್ವಾಲಿನ ಮೊದಲ
ಚಂದ್ರ ಕಾಣಿಸುತ್ತಿದೆ
ನಾಳೆ ನಮಗೆ ಈದ್..
ಅಮ್ಮ ಮಗನನ್ನೆತ್ತಿ
ಮುರುಕಲು
ಕಿಟಕಿಯೆಡೆಯಿಂದ
ಆಗಸದೆಡೆಗೆ ಕೈ
ತೋತಿಸುತ್ತಿದ್ದರೇ
ಮಗ ಅಮ್ಮನ ಮುಖ
ನೋಡಿ ಕೇಳುತ್ತಿದ್ದಾನೆ
'ನಾಳೆ ನಾವೂ
ಹಬ್ಬ ಮಾಡುತ್ತೀವಾ' ???
ಮಗನ ಮುಗ್ಧ ಪ್ರೆಶ್ನೆ
ಅಮ್ಮನ ಮನ ಕಲಕಿತು..
ಹೊಟ್ಟೆಯಲ್ಲೊಂದು
ಮಗುವನ್ನು ಕರುಣಿಸಿ
ಗಂಡನೆಂಬ ಕಾಮಪಿಪಾಸು
ಓಡಿ ಹೋದ ಮೇಲೆ
ಬಡತನದ ಬೇಗುದಿಯಲ್ಲಿ
ಮಗುವನ್ನು ಸಾಕಲು
ಪಟ್ಟ ಕಷ್ಟಪಾಡು
ದೇವನಿಗೆ ಪ್ರೀತಿ ....
ಮಗನ ಪುಟ್ಟ ಬೆರಳುಗಳು
ಕಣ್ಣೀರನ್ನು ಒರೆಸಿದಾಗ
ವಾಸ್ತವಕ್ಕೆ ಬಂದಳಮ್ಮ..
ಊರಲೆಲ್ಲಾ
ಈದ್ ಸಂಭ್ರಮ
ಹೊಸಬಟ್ಟೆ ತೊಟ್ಟ
ಮಕ್ಕಳೆಡೆಯಲ್ಲಿ
ತನ್ನ ಮಗನೂ
ಸಂಭ್ರಮದಿಂದ
ಹೋಗುವ ದೃಶ್ಯವನ್ನು
ಬಾಗಿಲ ಮರೆಯಲ್ಲಿ
ಕಂಡ ಅಮ್ಮನ
ಕರುಳು ಹಿಂಡಿದಂತಾಯ್ತು...
ಮಗನಿಗೇನು ಗೊತ್ತು ??
ಅದು ಸಿರಿವಂತನೊಬ್ಬ
ಕೊಟ್ಟ ಹಳೇ ಉಡುಪೆಂದು...
ದಾನಿಗಳು ಕೊಟ್ಟ
ಅಕ್ಕಿಯನ್ನು ಅನ್ನಕ್ಕಿಟ್ಟದ್ದು
ನೆನಪಾಗಿ ಒಳ ನಡೆದಳು
ತನ್ನ ಕಣ್ಣೀರ ಕಡಲನ್ನು
ಒರೆಸುತ್ತ ತನದದೇ
ಹಳೇ ಸೀರೆಯಲ್ಲಿ ..
-- ಅಲ್ತಾಫ್ ಬಿಳಗುಳ.
- ಅಲ್ತಾಫ್ ಬಿಳಗುಳ
24 Jun 2017, 09:02 am
Download App from Playstore: