ಎಡಬಿಡಂಗಿಗಳ ಒಡಕು ಮನೆ!!

ಮುಂಜಾನೆ ಮಂಜಿನಲಿ
ಪುಂಡರ ಸಂಗದಲಿ
ದಿನವಿಡೀ ಅಲೆಯುತಲಿ
ಮೂರೊತ್ತು ಉಂಡು ಮಲಗುವ ಮಗ

ಇದ್ದದಿರಲಿ- ಹೊದದ್ದು ಹೋಗಲೆಂಬ
ಮನಸಿಂದ ದಿನವಿಡೀ ಸೋನೆ
ಮಳೆಯಂತೆ ಜಿನುಗುತ ನುಲಿಯುತ
ಇದ್ದದ್ದನ್ನ ಬೇಯಿಸಿಡುವ ಸೊಸೆ

ಹರಟುತ್ತ ಮನೆ- ಮನೆ ತಿರುಗುತ್ತ
ಹಿತ್ತಾಳೆ ಕಿವಿಯ,ಒಡಕು ಬಾಯಿಂದ
ಆದಿರಂಪಾ- ಬೀದಿರಂಪಾ
ಮಾಡುತ್ತ ಸೊಸೆಯ ಮೇಲೆ
ಕತ್ತಿ ಮಸೆಯುವ ಮಡದಿ...

ಎತ್ತು ಏರಿಗೆಳೆದರೆ
ಕೋಣ ನೀರಿಗೆಳೆವಂತ
ಸಂಸಾರದ ಸೂತ್ರದಾರ
ಒಬ್ಬ ಎಡಬಿಡಂಗಿ...........

ಅಪ್ಪ ಹಾಕಿದ ಆಲದ ಮರ!
ಅದೆ ಎಲ್ಲರಿಗು ಆಧಾರ!
ಇದೆ ಅವರ ನಿರ್ಧಾರ!
ಆರಕೇರದೆ ಮೂರಕ್ಕಿಳಿಯದೆ
ಸಾಗುತಹದು ಈ ಸಂಸಾರ!


ಶಾರಧ

- ಶಕುಂತಲಾ

24 Jun 2017, 01:13 pm
Download App from Playstore: