ಕಣ್ಣು ಕಾಣದ ಮುದುಕಿ

ಕಣ್ಣು ಕಾಣದ ಮುದುಕಿ
ಕಾಡೆಲ್ಲ ಅಲೆದಾಡಿ
ಮತ್ತೆ ಮರಳಿಹಳು ಮನೆಗೆ
ಕತ್ತಲಲ್ಲಿ ಕಡುಗತ್ತಲಲ್ಲಿ!!

ಕಾಡ ಸುಮಗಳ ಕುರಿತು
ಕಾಣದೇ ತಾ ಅರಿತು
ಘಮಿಸಿ ತಂದಹಳು
ಹೊತ್ತು ಬುಟ್ಟಿಯಲ್ಲಿ!!

ಬೊಗಸೆ ಹೂಗಳ ರಾಶಿ
ಚೆಂದದಿ ಪರಿಮಳ ಸೂಸಿ
ಕರೆತಂದಿತು ಊರ ನಾರಿಯರ
ಮನ ಸೆಳೆದು ಎಲ್ಲ ಲಲನೆಯರ!!

ಎಲ್ಲ ಸ್ತೀಯರೂ ಒಂದಾಗಿ
ಕಾಡ ಹೂವಿಗೆ ಮರುಳಾಗಿ
ಕಾಡಿ ಬೇಡಿದರು ಹೂವ
ನೀಡೆಂದು ಆ ಮುದುಕಿಯನ್ನು!!

ಕಣ್ಣು ಕಾಣದ ಮುದುಕಿ
ಎಲ್ಲರಿಗೂ ಸಮನಾಗಿ
ಹೂ ನೀಡಿ ಹೇಳದಳು
ಇದು ವನ ಸುಮವೆಂದು!!

ಯಾರು ಮುಡಿದು
ಇದು ಬಾಡುವುದಿಲ್ಲವೋ
ಅವರೇ ನನ್ನ ಕತ್ತಲೆಯ
ಬದುಕಿನ ಕಣ್ಣುಗಳು ಎಂದು!!.

- ಪಿ.ಜಿ.ಜ್ಯೋತಿ

25 Jun 2017, 10:54 am
Download App from Playstore: