ಮೋರಿ ಎನ್ನುವರೆಲ್ಲ
ಮೋರಿ ಎನ್ನುವರೆಲ್ಲ
ಊರ ಕೊಳೆಯನ್ನು ಹೊತ್ತು
ದೂರ ಹೋಗುವ ನನ್ನ ಕಂಡು
ಮುಖವ ತಿರುವುವವರೆ ಎಲ್ಲ!!
ಮೋರಿ ಎನ್ನುವರೆಲ್ಲ
ಕೊಳೆತು ನಾರುವ ಕಸವ
ತಂದು ನನ್ನ ಒಡಲಲ್ಲಿ
ಸುರಿದು ಮೂಗು ಮಚ್ಚುವರೆಲ್ಲ!!
ಮೋರಿ ಎನ್ನುವರೆಲ್ಲ
ಎಲ್ಲರ ಮನೆಯ ಕೊಳೆಯನ್ನು
ತೊಳೆದು ಶುಧ್ದಗೊಳಿಸಿ
ಕೊಳೆ ನೀರಾಗಿ ಹರಿದು ಬಂದೆ ನಾನು!!
ಮೋರಿ ಎನ್ನುವರೆಲ್ಲ
ಕನಿಕರವೇ ಇಲ್ಲದ ಜನ
ನನ್ನ ಕಂಡು ಅಸಹ್ಯವೆಂದು
ಕರೆದು ನನ್ನ ನೋಯಿಸುವರಲ್ಲ!!
- ಪಿ.ಜಿ.ಜ್ಯೋತಿ
25 Jun 2017, 12:25 pm
Download App from Playstore: