ಮುದ್ದು ಕೃಷ್ಣ
ಬೆಣ್ಣೆ ಕದಿಯುವ ಮುದ್ದು ಕೃಷ್ಣ ಅವನ ಚುರುಕು ನೋಟದಲ್ಲಿ ನನ್ನ ಮನವ ಕದ್ದುಬಿಟ್ಟ...............
ಬ್ರಹ್ಮಾಂಡವ ಬಾಯಲ್ಲಿ ಬಚ್ಚಿಟ್ಟ ಕಳ್ಳ ಕೃಷ್ಣ
ನನ್ನ ಮನವ ಅವನ ಹೃದಯದ ಅರಮನೆಯಲಿ ಕೂಡಿಟ್ಟ.........
ಮಾಧವನ ಮುರಳಿ ಗಾನವ ಕೇಳುತಿರಳು ನನ್ನೆದೆಯ ವೀಣೆ ತನ್ನಂತೆ ತಾನೆ
ಸ್ವರಗಳ ಜೊತೆಗೂಡಿಸುತ್ತಿರುವು ನಿನ್ನ ಉಸಿರಿನಾಡಿಗೆ ಕೃಷ್ಣ...............
ನವಿಲುಗರಿಯ ಚೆಲುವಿಗೆ ಮನಸೋತ ಮಲ್ಲಿಗೆ ನಿನ್ನ ಶಿಗೆಯಲ್ಲಿ ಸೇರಲೆಂದು ಪರದಾಡಿತು ನಿನ್ನ ಮನದ ಮಲ್ಲಿಗೆಯಾದ ಶ್ರೀಯ ಅನುಮತಿ ಕೇಳದೇನೆ ಕೇಳಿತು.............
ನಿನ್ನ ನಗೆಯ ಸದ್ದಲ್ಲಿ ನಿನಾಗದ ನೀನಾಗಿರಳು ನನಗನುಮತಿ ನೀಡುವೆಯಾ ನವನೀತ ಚೋರ..............
- ಚುಕ್ಕಿ
25 Jun 2017, 04:27 pm
Download App from Playstore: