ಪ್ರೀತಿ ನೀತಿ ಭೀತಿ....

ನಿನ್ನಯ ಪ್ರೀತಿ
ಇರಲು ಹೂವಿನ ರೀತಿ
ಮನಸಿಗೆ ಸಮ್ಮೋಹನ ಸ್ಥಿತಿ
ನನ್ನಲಿ‌ ನನ್ನನೆ‌‌‌ ಹುಡುಕುವ ಪರಿಸ್ಥಿತಿ
ಕೊನೆಯಿರುವುದೆ ಕಣ್ಣೊಳಗಿನ ಕನಸಿಗೆ ಮಿತಿ

ನುಡಿವ ಗಿಳಿಯಂತೆ ನಾನು
ಕೈ ಹಿಡಿದು ನಡೆಸಿರಲು ನೀನು
ಕಾದು ಕೊಲ್ಲುವ ಗಿಡುಗವಾದೆಯೇನು?
ಕತ್ತಲಲಿ‌ ಕತ್ತ ಇಸುಕಿರಲು ನೀನು
ನಂಬಿ ಬಂದ ಉಸಿರಿಗೆ ಅರ್ಥ ಉಳಿಯುವುದೇನು

ನನ್ನದು ಎದೆಗವಚಿ‌ ಕೂತ ‌ಗುಬ್ಬಚ್ಚಿಯ ಮತಿ
ನೀನರಿಯಲಿಲ್ಲ‌ ಎದೆಗೊರಗಿ ಕುಳಿತಾಗಿನ ಮನಸ್ಥಿತಿ
ಪ್ರೀತಿ ಪ್ರೇಮಕೆ ಇರಬೇಡವೆ ಒಂದು ನೀತಿ
ಜಾರಿ ಹೋದರೆ ಮನಸೆ ನಂಬಿದ ಪ್ರೀತಿ
ಸಾವು ಬಂದರು ಇರದು ಜೀವಕೆ ಭೀತಿ

- ಶ್ರೀಕಾವ್ಯ

25 Jun 2017, 10:26 pm
Download App from Playstore: