ನನ್ನ ಮನಸಿನ ಅರಗಿಣಿ

( ನನ್ನ ಮನಸಿನ ಅರಗಿಣಿ )

ಕನಸಿನ ಕಣ್ಮಣಿಯೇ‌ .
ನೀನೆ ನನ್ನೆದೆಯ ಅರಗಿಣಿಯೆ.||
ನನ್ನ ಮನಸಿನ ಮನೋರಮೆಯೆ
ನಾನು ಸದಾ ನಿನ್ನ ಪ್ರೀತಿಗೆ ಚಿರರುಣಿಯೆ ||

ನನ್ನ ಬಾಳಿನ ಬೆಳದಿಂಗಳ ಬೆಳಕು ನೀನು.
ಆ ಬೆಳಕಿಗೆ ಕಾವಲುಗಾರ ನಾಗುವೆ ನಾನು||
ನನ್ನ ಹ್ರುದಯದ ಬಡಿತ ನೀನು.
ಅದರಲ್ಲಿ‌ ಅಡಗಿರುವ ತುಡಿತ ನಾನು.||
ತುಡಿತದಿ‌‌ ಅಡಗಿರುವ ಜೀವ ನೀನು
ಅದಕ್ಕೆ ಬೇಕಾದ ಆಸರೆ ನೀಡುವೆ‌ ನಾನು ||

ನೀನು ನನ್ನ ಮನಸ್ಸಿನ ಭಾವನೆ .
ನಾನೇ ನಿನ್ನ ಕನಸಿನ ಕಲ್ಪನೆ .||
ಎಂದೆಂದೂ ನಿನಗಾಗಿ ನನ್ನ ಮನದ ಆಲಾಪನೆ.
ನಿನಗಾಗಿ ನನ್ನ ಹ್ರುದಯದಿ ಕಟ್ಟಿರುವೆ
ಅರಮನೆ || ನಲ್ಮೆಯ. ಮನವೇ.

ನನ್ನ ಮನದಿ ನಿನ್ನ ನೆನಪು . ಸದಾ. ಹಸಿರು ||

‌ ( ಸಂತೋಷ್ || ಜೀತು )

- ಸಂತೋಷ್//ಜೀತು

26 Jun 2017, 12:02 pm
Download App from Playstore: