ಹಿಡಿ ಶಾಪ
ನಾಗರಿಕರಂತೆ- ಸುಸಂಸ್ಕೃತರಂತೆ
ಮುಗುಳುನಗೆ ಬೀರುತ್ತ........
ದಿನವಿಡೀ ಹುದ್ದೆದಾರರಂತೆ
ಸಂಚರಿಸುವರು ಅತ್ತಿಂದಿತ್ತ......
ಮುಂಜಾನೆ ಮಬ್ಬಿನಲಿ
ಮುಸ್ಸಂಜೆ ಹೊತ್ತಿನಲಿ
ಹೊಂಚು ಹಾಕುತ್ತ ಕೂರುವರು
ಅಲ್ಲಿ......ಇಲ್ಲಿ......
ಗಮನ ಬೇರೆಡೆ ಸೆಳೆದು
ತೋರಿಸುವರು ಕೈ ಚಳಕ
ಇವರಿಗಿಲ್ಲ ವಯಸ್ಸಿನ ಮಿತಿ
ಮಾಡುವರು ಎಲ್ಲರ ತಿತಿ
ದೋಚಿ ಹುಣ್ಣುವುದೆ
ಇವರ ಮಂತ್ರ....
ದ್ರೋಹಿಗಳ ಬಂದಿಸಲು
ಆರಕ್ಷಕರು ಮಾಡುವರು
ಹಲವು ತಂತ್ರ....
ಮಂತ್ರಾಕ್ಷತೆಯ ಮಂತ್ರದಿ
ಮಿಂದೆದ್ದ ಮಾಂಗಲ್ಯವನ್ನು
ಬಿಡರು ಈ ದುರುಳರು
ಕೊನೆಗೊಮ್ಮೆ ನರಳಲೇಬೇಕು
ನಮ್ಮೆಲ್ಲರ ಹಿಡಿ ಶಾಪದಿ.....
ನಿಮ್ಮ ಮನದ ಕದವ ತಟ್ಟದೆ
ಪತಿಯ ಅಗಲಿದ ಸತಿಯ.....
ಮಕ್ಕಳ ಆರ್ಥನಾಧ....
ಕಷ್ಟದಿ ದುಡಿದು ಗಳಿಸಿದವರ
ಬಿಸಿಯುಸಿರಿನ ಶಾಪ.......
ಲೂಟಿ ಮಾಡುವುದ ಬಿಡಿ......
ನೀಡಿ ಬಾಳುವುದ ಕಲಿ......
ಮಾನವೀಯತೆಯ ಪಡಿ.....
ಇಲ್ಲವೆ ಮುಂದೆ ನಿನ್ನ ಬಲಿ.....
ಶಾರಧ
- ಶಕುಂತಲಾ
26 Jun 2017, 07:20 pm
Download App from Playstore: