ಹರಿದಿದೆ ರಕ್ತ ಕಣ್ಣೀರು..

ಮಕ್ಕಳ ಅರೆಹೊಟ್ಟೆಯ ತುಂಬಲು ಸಜ್ಜಾದ
ಕುದಿಗಂಜಿಯ ದಿಟ್ಟಿಸಿಹಳು ತಾಯಿ
ಹಣೆಯಲಿ ಮೂಡಿದ ಬೆವರ ಹನಿಗಳು
ಮುಂಗುರುಳ ತಾಕಿ ಜಿನುಗುತಿದೆ
ಕೆಂಪು ಕಿಡಿಯಾಗಿ
ಒಲೆಯ ಶಾಖದ ಗುರುತಾಗಿ
ಬಡ ಒಡಲ ತಾಪದ ಕುರುಹಾಗಿ
ಉಪವಾಸದ ಸರದಿ ಗಂಡನದೆಂದು ನೆನೆದು
ಕಂಗಳು ತುಂಬಿ ಕುಂಕುಮ ಕರಗಿ
ಹರಿದಿದೆ ರಕ್ತ ಕಣ್ಣೀರು...

- Indushekar Chinivar

27 Jun 2017, 09:46 pm
Download App from Playstore: