ನಿದ್ದೆಯಲ್ಲಿನ ನನಸು.........

ಮಲಗು ನೆಮ್ಮದಿಯಾಗಿ ಕನಸಿನ ಕಂಬಳಿ ಹೊದಿಸುವೇ ನಿನ್ನ ನಿರ್ಮಲವಾದ ಮನಸಿಗೆ
ಮಂದಹಾಸದ ಹಾಸಿಗೆಯ ಹಾಸಿ..............

ಲಾಲಿ ಹಾಡು ನಿನ್ನ ಕಣ್ಣ ರೆಪ್ಪೆಗಳಿಗೆ
ನಿದ್ದೆಯಲ್ಲಿ ಎದ್ದು ನೋಡದೆ ನನ್ನ ಕನಸಿನ ಮನಸಲ್ಲಿ.......................

ದಿನವೆಲ್ಲ ಓಡಾಡಿ ಸುಸ್ತಾಗಿರುವ ಕಾಲುಗಳಿಗೆ ವಿಶ್ರಾಂತಿಯ ಸಮಯಕೊಡು ಮತ್ತೆ ಮತ್ತೆ ಹೆಚ್ಚರಗೊಳ್ಳದೆ...............

ನಿದ್ದೆಯಲ್ಲಿನ ನಿನ್ನ ಅಪ್ಪಿಗೇ ನನ್ನ ಮನಕೆ ನೆಚ್ಚಿನ ಕನಸಾಗುವುದು ಏಕೆಂದರೆ ಅದರಲ್ಲಿ ನಿನ್ನ ನಗುವು ಬಿಟ್ಟರೆ ಮುನಿಸು ಕಾಣಲಾರೆದು ನನ್ನ ಕಣ್ಣಿಗೆ........

ಜೋಕಾಲಿ ತೂಗುವ ಕೈಯಿಗೆ ನಿನ್ನ ಪ್ರೀತಿಯಿಂದ
ನೋಡಿಕೊಳ್ಳುವ ಆಸೆ ಏಳು ಜಮ್ಮಕೂ ಕೈಬಿಡದೆ ನಿನ್ನ ಜೊತೆಯಾಗಿ.............

ನಿದ್ದೆಯಲ್ಲಿನ ನನಸು ಆಗುವುದೆಂದು ಭಾವಿಸುವೆ ನನ್ನ ಜೀವನದ ಸವಿಗನಸು ನೀನಿದ್ದರೆ ನನ್ನ ಜೊತೆಗೆ ಎಂದೆಂದೂ ನನ್ನ ಮನಸ್ಸು ಹರುಷದ ಹೊಂಬಣ್ಣ ಹೊತ್ತ ಕಾಮನಬಿಲ್ಲಿನ ಬೆಳಕಿನೆಡೆಗೆ............

- ಚುಕ್ಕಿ

27 Jun 2017, 11:18 pm
Download App from Playstore: