ಅಂಬರದ ಚೆಲುವೆ ನೀನೆ ನನ್ನ ಒಲವೆ
( ಅಂಬರದ ಚೆಲುವೆ)
ನೀ ಬರುವದಾರಿಯಲಿ ನಿನಗಾಗಿ ಕಾಯುತಲಿರುವೆವು ನಾವಿಲ್ಲಿ ಇ ಸುಂದರ ಸ್ಥಳದಲ್ಲಿ.
ನಿಮಗಾಗಿ ನಾವು. ಪುಷ್ಪ ಮಳೆಗಯ್ಯಲು ಕಾದು ಕುಳಿತಿರುವೆವು ಇ ಸುಂದರ ಪ್ರಕ್ರುತಿಯ ನಡುವಿನಲಿ .|ಸ|
ಹಕ್ಕಿಗಳ ಇಂಪಾದ ನಾದ ನಿನಗಾಗಿ ಗಾನ ಸುಧೆಯನ್ನು ಹರಿಸಲು ಸಾಲಾಗಿ ಕಾದು ಕುಳಿತಿವೆ ಇ ಸುಂದರ ಬನದಲ್ಲಿ.
ಇ ತಂಗಾಳಿಯ ನಡುವಿನಲಿ ಇಂಪಾದ ನಿನ್ನ ಕಾಲ್ಗೆಜ್ಜೆಯ ಶಬ್ದ ಶ್ರುತಿಸೇರಿ ಹಾಡಿದಂತೆ ಗೀಜುಗ ಗಿಜುಗುಡುವ ಶಬ್ದದ ನಡುವೆ ನನ್ನ ಮನದಿ ನಾಟುತ್ತಿದೆ ಮನವೆ.|ಸ|
ಆ ಅಂಬರದಿಂದ ಕೆಳಗಿಳಿದು ಬರುತಿರುವೆ ನೀ. ನಿನ್ನ ಪಾದದ ಸ್ಪರ್ಷಕ್ಕಾಗಿ ಗರಿಕೆ ಕೂಡ ಹರುಷದಿ ಕಾದಿದೆ ಓ ನನ್ನ ಹ್ರುದಯವೇ.
ನಿನಗಾಗಿ ಇಂಪಾದ ಗಾಳಿಯನ್ನು ತಂಪಾಗಿ ಸವಿಯುತ ಕೆಂಪಾದ ನನ್ನ ತುಟಿಯಲಿ ನಿನ್ನ ಸ್ಮರಣೆ ಮಾಡುತ್ತ ನಾ ಕುಳಿತಿರುವೆ ಈ ಸುಂದರ ಪ್ರಕ್ರುತಿಯ ನಡುವಿನಲಿ |ಸ|
ಜಿನುಗುಡುವ ಮಳೆ ಹನಿಯು ತಣ್ಣನೆ ಮೈ ಸೊಕಿರಲು ಝರಿಯಾಗಿ ಮಳೆ ಹನಿಯು ನದಿಯಾಗಿ ಹರಿದಿರಲು ಎಲ್ಲರೂ ಓಟ್ಟಾಗಿ ಕಾದಿವೆವು ನೀ ಬರುವ ದಾರಿಯಲಿ.
ಓ ನಲ್ಮೆಯ ಅಂಬರದ ಚೆಲುವೆ..|ಸ|
( ಸಂತೋಷ್// ಜೀತು )
- ಸಂತೋಷ್//ಜೀತು
28 Jun 2017, 11:14 am
Download App from Playstore: