ಮುದ್ದಿನ ತಮ್ಮ ತಂಗಿ
ನಾ ಬೆಳೆದೆ ಒಬ್ಬಂಟಿಗನಾಗಿ,
ತಂದೆ ತಾಯಿಯರ ಮುದ್ದಿನ ಮಗನಾಗಿ,
ನನಗೂ ಇದ್ದು ಸಾಕಾಗಿತ್ತು ಒಂಟಿಯಾಗಿ,
ಪ್ರೀತಿಯ ಜಗಳವಾಡುವವರಿಲ್ಲ ಜೊತೆಯಾಗಿ,
ಬಂದಿರಿ ನೀವು ಪ್ರೀತಿಯ ಚಿಲುಮೆಗಳಾಗಿ,
ಒಂಟಿಯಾದ ನನ್ನ ಜೊತೆಯಾಗಿ,
ಮಾತು ಕೊಡುವೆನು ನಾನು ನಿಮಗಾಗಿ,
ಇರುವೆನೆಂದು ಸದಾ ನಿಮ್ಮ ನೆರಳಾಗಿ,
ಬೇಡುವೆ ನಾ ಆ ದೇವರ ಶಿರಬಾಗಿ,
ಹೀಗೆಯೇ ಸಾಗುತಲಿರಲೆಂದು ನಮ್ಮ ಪ್ರೀತಿಯ ಭೋಗಿ,
ಪೂರ್ವ ಜನ್ಮದಾ ಪುಣ್ಯ ಕಾದಿತ್ತು ನನಗಾಗಿ,
ಪಡೆಯಲೆಂದು ನಿಮ್ಮನ್ನು ನನ್ನ ತಮ್ಮ ತಂಗಿಯರಾಗಿ.
----- tippu -----
- tippu
28 Jun 2017, 07:31 pm
Download App from Playstore: