ಸೋಲುವ ಮನಕೆ....

ಸೋಲುವ ಮನಕೆ
ಎಲ್ಲರೂ ಕಾಡುವರು ಯಾಕೆ
ಅವರಿಗೂ ಇರಲಾರದೆ ಬಯಕೆ‌
ಎಂದು ತಿಳಿಯುವುದು ಮನಸು ಈ‌ ಜಗಕೆ...

ಎಲ್ಲರ ಮೊಗದಲು ನಗುವ ನೋಡ ಬಯಸುವುದೆ ತಪ್ಪೆ
ಬಯಸಿದ ತಪ್ಪಿಗೆ ಆ ಮನಸನೆ ಮಾಡಿ ಬಿಡುವರು ಸಪ್ಪೆ
ಅವಶ್ಯಕತೆ ಮುಗಿದ ಮೇಲೆ ಅವರೇನಿದ್ದರು ಕೇವಲ ಸಿಪ್ಪೆ
ತಂದಿಡುವರು ಸ್ಥಿತಿ ನೆಮ್ಮದಿಯಾಗಿ‌ ಮುಚ್ಚಿಲಾಗದಂತೆ ರೆಪ್ಪೆ..

ಮುಖವಾಡ ಧರಿಸಿ ಜೊತೆಗೆ ನಗುತ ಇದ್ದರೆ ಸಾಕೆ
ಮುಕ್ತ ಮನಸಿಗೆ ‌ಬೆಲೆ ಕೊಡರು ಯಾರು ಏತಕೆ
ಬದುಕೆಂದರೇನು ಕೇವಲ ಮಾತ್ರ ಆಡಂಬರ ತೋರಿಕೆ
ಒಮ್ಮೆ ಕೊಂದರೆ‌ ಮುಗ್ಧ ಮನಸ ಮತ್ತೆ ಸಿಗದು ಜೋಕೆ....

ಏನೆ ಆದರು ನೋಡಲಾಗದು ಯಾರದೆ ಕಣ್ಣೀರು
ಎಂದೆಂದೂ ಎಲ್ಲರ ಬದುಕಾಗಿರಬೇಕು ಪನ್ನೀರು
ನಗುತಲಿರುವ ಮನಸುಗಳೆ ಕಟ್ಟುವುದು ಬಾಳಿಗೆ ತಳಿರು
ಕಾಡಿಸಿದವರು ನಮ್ಮವರಲ್ಲದೆ ಮತ್ತೆ ಇನ್ಯಾರು
ಮತ್ತೆ ನಗಿಸಿ ನಕ್ಕು ಬದುಕಿಬಿಟ್ಟರಾಯಿತು ಶಾಶ್ವತವಾಗಿ ಭುವಿಯ ಮೇಲೆ ಉಳಿಯರು ಯಾರು

- ಶ್ರೀಕಾವ್ಯ

28 Jun 2017, 10:40 pm
Download App from Playstore: