ನಿವೇದನೆ!
ಮನದ ಮಾತುಗಳ
ಮೌನದಲ್ಲೆ ಆಲಿಸುತ
ನೀಡುತಿಹೆ ಸಂದೇಶಗಳ
ನಾನಿಹೆ ನಿನ್ನ ದರ್ಶನವ ಕಾಯುತ!
ಮಧುರ ಗಾನದಿ
ವೀಣೆಯ ನುಡಿಸಿ
ಸಪ್ತ- ಸ್ವರಗಳ
ಮಧುವ ಹರಿಸಿ
ಜಗವ ತಣಿಸಿದೆ!
ನನ್ನೆಲ್ಲ ನೋವು- ನಲಿವನು
ನಿನಗೆ ಅರುಹುತ್ತಾ....
ಏಕಾಂಗಿಯಾಗಿ ಚಲಿಸುವೆನು
ನಿನ್ನ ದರ್ಶನಕ್ಕಾಗಿ ಕಾಯುತ್ತಾ.....
ನಾವೇ ಮಾಡಿದ ಮೂರ್ತಿ ನೀನು
ನಿನ್ನ ,ಮುಂದೆ ನಿಂತಿರುವೆನು ನಾನು
ಕಾಯುವೆಯೇನು? ಕನಸುಗಳ
ಸರಮಾಲೆಯ ನನಸು ಮಾಡುತ!
ನೀನೆ ಮನದಿ ತುಂಬಿರಲು
ಆಗಸವ ನೋಡುತ ಸಾಗಲು
ನೂರು ಕಲ್ಪನೆಯು ಮೂಡಿ
ಬೆಳ್ಳಿಮೋಡವು ಸಾಗಲು
ನಿನ್ನ ಬಿಂಬವ ನೋಡಿ
ತಣಿಯಿತು ಮನವು ಹಾಡಿ!
ಶಾರಧ
- ಶಕುಂತಲಾ
29 Jun 2017, 06:21 pm
Download App from Playstore: